







ಪುತ್ತೂರು: ಪುತ್ತೂರು ದಸರಾ ಎಂಬ ನಾಮಾಂಕಿತದೊಂದಿಗೆ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ, ಪುತ್ತೂರು ದಸರಾ ಶೋಭಾಯಾತ್ರೆಯ ಕುರಿತು ಆಯೋಜಿಸಲಾದ ಇನ್ಸ್ಟಾಗ್ರಾಂ ರೀಲ್ಸ್ ಸ್ಪರ್ಧೆಯ ಫಲಿತಾಂಶ ಇಂದು (ಅ.25) ಸಂಜೆ 6 ಗಂಟೆಗೆ ಪ್ರಕಟಗೊಳ್ಳಲಿದೆ.


ರಾಜ್ಯದ ವಿವಿಧ ಕಡೆಗಳಿಂದ ವೀಡಿಯೋ ಅಪ್ಲೋಡ ಆಗಿದ್ದು ವಿಜೇತರ ವಿವರವನ್ನು ಪುತ್ತೂರು ದಸರಾ ಎಂಬ ಇನ್ಸ್ಟಾಗ್ರಾಂನಲ್ಲಿ ಸಂಜೆ 6 ಗಂಟೆಯ ಬಳಿಕ ವೀಕ್ಷಿಸಬಹುದಾಗಿದೆ. ಬಹುಮಾನವಾಗಿ ಪ್ರಥಮ ಬಹುಮಾನವಾಗಿ ರೂ.10,000 ದ್ವಿತೀಯ 6,000, ತೃತೀಯ 4,000 ರೂ.ಗಳನ್ನು ವಿಜೇತರಿಗೆ ನೀಡಲಾಗುವುದು ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತಿಳಿಸಿದ್ದಾರೆ.













