







ಪುತ್ತೂರು : ಪುತ್ತೂರು ದರ್ಬೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಪಾಂಡೇಶ್ವರ ಶಾಖೆಯ ಪ್ರಥಮ ವಾರ್ಷಿಕ ದಿನದ ಪ್ರಯುಕ್ತ ಅ. 25 ರಂದು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಅವರ ಉಪಸ್ಥಿತಿಯಲ್ಲಿ ಗಣಹೋಮ ನಡೆಯಿತು.


ನಿರ್ದೇಶಕರಾದ ಅಶ್ವಿನ್ ಎಲ್ ಶೆಟ್ಟಿ, ಸೀತಾರಾಮ ಶೆಟ್ಟಿ, ರಶ್ಮೀ ಅಶ್ವಿನ್ ಶೆಟ್ಟಿ , ಮಹಾಪ್ರಬಂಧಕ ವಸಂತ್ ಜಾಲಾಡಿ, ಸಹಾಯಕ ಮಹಾ ಪ್ರಬಂಧಕ ಸುನಾದ ರಾಜ್ ಶೆಟ್ಟಿ ,ಶಾಖಾ ವ್ಯವಸ್ಥಾಪಕಿ ಮಹಾಲಕ್ಷೀ .ಕೆ, ಸುಬ್ರಹ್ಮಣ್ಯ ಶಾಖೆಯ ವ್ಯವಸ್ಥಾಪಕ ಪ್ರದೀಪ್ ರೈ, ಬಿ.ಸಿ ರೋಡು ಶಾಖೆಯ ವ್ಯವಸ್ಥಾಪಕ ವಿನೋದ್ ಶೆಟ್ಟಿ,ಉದ್ಯಮಿ ರಮೇಶ್ ಶೆಟ್ಟಿ, ಗೋಪಾಲ ಸುವರ್ಣ, ಜಯಆಳ್ವ, ವಿಜಯಲಕ್ಷ್ಷೀ ಕಾಮತ್, ನಂದಗೋಕುಲ ಸೀತಾರಾಮ ಶೆಟ್ಟಿ, ಸಿಲ್ವಿನ್ -ನ್ಸಿಸ್ ಪೌಲ್, ಶಾಖೆಯ ಸಿಬ್ಬಂದಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.













