ಅನುರಾಗ ವಠಾರದಲ್ಲಿ ಕುಶಲ ಹಾಸ್ಯಪ್ರಿಯರ ಸಂಘದ ‘ಕುಶಲ ಸಂಜೆ’

0

ಪುತ್ತೂರು: ಹಾಸ್ಯಪ್ರಜ್ಞೆ ಇಲ್ಲದಿದ್ದರೆ ಉತ್ತಮ ಮನಸ್ಥಿತಿ ಇರಲು ಸಾಧ್ಯವಿಲ್ಲ. ಯಾವಾಗಲೂ ಗಂಭೀರವಾಗಿದ್ದರೆ ಜೀವನ ಸುಖಕರವಾಗಿರುವುದಿಲ್ಲ. ಹಾಸ್ಯವನ್ನು ಅನುಭವಿಸುವ ಗುಣವಿರಬೇಕು ಎಂದು ಇಂಜಿನಿಯರ್ ಪ್ರಸನ್ನ ಎನ್. ಭಟ್ ಹೇಳಿದರು.

ಅನುರಾಗ ವಠಾರದಲ್ಲಿ ಅ.24ರಂದು ನಡೆದ ಕುಶಲ ಹಾಸ್ಯಪ್ರಿಯರ ಸಂಘದ ‘ಕುಶಲ ಸಂಜೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಕೆಲವು ತಿಳಿಹಾಸ್ಯ ಚಟಾಕಿಗಳನ್ನು ಹಂಚಿಕೊಂಡು ಸಂಘಕ್ಕೆ ಶುಭ ಹಾರೈಸಿದರು.

ಶ್ರೀಮತಿ ಸಾವಿತ್ರಿ ಪಿಲಿಂಜ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಜಯರಾಮ ಪುಣ್ಚಿತ್ತಾಯ ಸ್ವಾಗತಿಸಿ, ಅತಿಥಿಗಳಿಗೆ ಹೊದಿಕೆ ನೀಡಿ ಗೌರವಿಸಿದರು. ಸತ್ಯೇಶ್ ಕೆದಿಲಾಯ, ದಾಮೋದರ ಕೆ., ಕರುಣಾಕರ ಅಲೆಟ್ಟಿ, ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ತುಳಸೀದಾಸ ಪಿಲಿಂಜ, ಹರಿನಾರಾಯಣ ಮಾಡಾವು ಮತ್ತಿತರರು ತಮ್ಮ ನಗೆಮಾತು ಮತ್ತು ಹಾಡುಗಳಿಂದ ಸಭಿಕರನ್ನು ರಂಜಿಸಿದರು.

ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿ, ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಉಪಯುಕ್ತತೆ ಕುರಿತು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here