







ಅಧ್ಯಕ್ಷ: ಚಂದ್ರಶೇಖರ ಮಲ್ಲಿಕಟ್ಟೆ
ಕಾರ್ಯದರ್ಶಿ: ಸುರೇಶ ದಲ್ಕಜೆಗುತ್ತು
ಅಧ್ಯಕ್ಷೆ: ನಳಿನಿ ದಲ್ಕಜೆಗುತ್ತು
ಕಾರ್ಯದರ್ಶಿ: ಬೇಬಿ ಅಜ್ಜಿನಡ್ಕ


ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸಮಿತಿ ರಚನೆ ಸಂಘದ ಅಧ್ಯಕ್ಷ ರಮೇಶ್ ಕೋಡಂದೂರು ಇವರ ಅಧ್ಯಕ್ಷತೆಯಲ್ಲಿ ಅ.25ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು.



ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಮಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಪೂಜಾರಿ ದಲ್ಕಜೆಗುತ್ತು, ಗೌರವಾಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಕೊಚ್ಚಿ, ಕೋಶಾಧಿಕಾರಿಯಾಗಿ ಲಿಂಗಪ್ಪ ಪೂಜಾರಿ ಅಚ್ಚಿಲ, ಉಪಾಧ್ಯಕ್ಷರಾಗಿ ಲೋಕೇಶ್ ಕುಟ್ಟಿತಡ್ಕ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಪೂಜಾರಿ ಮೂಡಾಯಿಬೆಟ್ಟು, ಸಂಚಾಲಕರಾಗಿ ಗುರುವಪ್ಪ ಪೂಜಾರಿ ದಲ್ಕಜೆಗುತ್ತು, ಸಂಘಟನಾ ಕಾರ್ಯದರ್ಶಿಗಳಾಗಿ ಜತ್ತಪ್ಪ ಪೂಜಾರಿ ನಡುಮನೆ, ನಾಗೇಶ ಪೂಜಾರಿ ಕಲ್ಲಾಜೆ, ಈಶ್ವರ ಪೂಜಾರಿ ಮಾರಮಜಲು, ಜಯಂತ ಪೂಜಾರಿ ಮೂಡಾಯಿಬೆಟ್ಟು, ವಿನೋದ್ ಬಳಂತಿಮೊಗರು, ಯತಿನ್ ಕೊಡಂಗೆ ಆಯ್ಕೆಯಾದರು.
ಮಹಿಳಾ ಘಟಕದ ಅಧ್ಯಕ್ಷರಾಗಿ ನಳಿನಿ ಚಂದ್ರಶೇಖರ ಪೂಜಾರಿ ದಲ್ಕಜೆಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಬೇಬಿ ಅಜಿನಡ್ಕ, ಕೋಶಾಧಿಕಾರಿ ಉಷಾಲತಾ ಕೆಲ್ಲಾಳಿ, ಉಪಾಧ್ಯಕ್ಷರಾಗಿ ಸರೋಜಿನಿ ಮಾರಿಕಲ್ಲು, ಜೊತೆ ಕಾರ್ಯದರ್ಶಿ ಅಶ್ವಿನಿ ಅಜ್ಕಿನಡ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ದಿವ್ಯ ಮಲ್ಲಿಕಟ್ಟೆ, ಪುಷ್ಪ ಬೈಲುಪಾದೆ, ಭವಾನಿ ಕುಪ್ಲುಚಾರು, ನಳಿನಿ ಅಜ್ಕಿನಡ್ಕ, ಹೇಮಾವತಿ ದಲ್ಕಜೆ ಆಯ್ಕೆಯಾದರು.
ಸಂಘದ ಅಧ್ಯಕ್ಷ ರಮೇಶ್ ಕೋಡಂದೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಂಕೇಶ, ಗೌರವಾಧ್ಯಕ್ಷ ನಾರಾಯಣ ಪೂಜಾರಿ ನೀರುಮಜಲು, ಮಹಿಳಾ ಘಟಕದ ಅಧ್ಯಕ್ಷೆ ಭವ್ಯಮೋಹನ ಹಿತ್ತಿಲು, ಮಾಜಿ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ ನಾಟೆಕಲ್ಲು, ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ದಲ್ಕಜೆ ವೇದಿಕೆಯಲ್ಲಿದ್ದರು.










