







ಪುತ್ತೂರು: ಒಕ್ಕಲಿಗ. ಸ್ವ. ಸಹಾಯ ಟ್ರಸ್ಟ್ (ರಿ )ಪುತ್ತೂರು ಇದರ ನರಿಮೊಗರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷರು, ನರಿಮೊಗರು ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿಯ ಅಧ್ಯಕ್ಷರಾಗಿರುವ ಬಾಳಪ್ಪ ಗೌಡ ರವರ ತಾಯಿ ಸೀತಮ್ಮ ದೇವಪ್ಪ ಗೌಡ ಕೆದ್ಕಾರ್ ಅವರು ಇಂದು ನಿಧನರಾದರು.


ಮೃತರು ಕೃಷಿಕರಾದ ದೇವಪ್ಪ ಗೌಡ ಕೆದ್ಕಾರ್ ರವರ ಪತ್ನಿ. ಮಕ್ಕಳಾದ ಬಾಲಕೃಷ್ಣ ಗೌಡ, ಬಾಳಪ್ಪ ಗೌಡ, ತಿಮ್ಮಪ್ಪ ಗೌಡ, ಪುತ್ರಿಯರಾದ ವೇದ ಮತ್ತು ಪ್ರೇಮ ಹಾಗೂ ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದು, ಸಮಾಜದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದರು.



ಅವರ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಹಿತೈಷಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ










