ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿಕಾಸ್, ಕಂಗನಾ ರೈ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಕಾಣಿಯೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ದರ್ಬೆ ಪುತ್ತೂರಿನಲ್ಲಿ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ 14ರ ಮತ್ತು 17ರ ವಯೋಮಾನದ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ ವಿಕಾಸ್ ಮತ್ತು ಕಂಗನಾ ರೈ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 17 ರ ವಯೋಮಾನದ ಬಾಲಕರ ಹ್ಯಾಮರ್ ತ್ರೋ ದಲ್ಲಿ ವಿಕಾಸ್ (10ನೇ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಹೊನ್ನಪ್ಪ ಡಿ ನಿವೃತ್ತ ಸೈನಿಕರು ಸಿ ಆರ್ ಪಿ ಎಫ್ ಮತ್ತು ಪೂವಕ್ಕ ಪಿ ವ್ಯವಸ್ಥಾಪಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಲ್ಮಡ್ಕ ದಂಪತಿಗಳ ಪುತ್ರ.


14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಂಗನಾ ರೈ(8ನೇ) ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ 100ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಗ್ಗೋಳಿ ಸತೀಶ್ ರೈ ಮತ್ತು ಕುಸುಮಾವತಿ ರೈ ದಂಪತಿಗಳ ಪುತ್ರಿ.


ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ ಬಿ ತರಬೇತಿ ನೀಡಿರುತ್ತಾರೆ. ಇವರನ್ನು ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.

LEAVE A REPLY

Please enter your comment!
Please enter your name here