ಬೊಬ್ಬೆಕೇರಿ ಶಾಲೆಯಲ್ಲಿ ರಕ್ತದಾನ ಶಿಬಿರ

0

ಕಾಣಿಯೂರು: ಮಾನವನ ಜೀವ ಉಳಿಸುವಲ್ಲಿ ರಕ್ತದ ಪಾತ್ರ ದೊಡ್ಡದಾಗಿದೆ. ರಕ್ತದಾನವು ಅತ್ಯುನ್ನತ ಮಾನವೀಯ ಸೇವೆಯಾಗಿದ್ದು, ನಾವು ನೀಡುವ ರಕ್ತವು ಮತ್ತೊಬ್ಬರ ಜೀವ ಉಳಿಸಬಲ್ಲದು ಎಂದು ಎಣ್ಮೂರು ವಿವೇಕ ಜಾಗೃತ ಬಳಗದ ಕಾರ್ಯಾಧ್ಯಕ್ಷ ಅರವಿಂದ ಕೆ.ಎಸ್ ಹೇಳಿದರು.

ಅವರು ವಿವೇಕ ಜಾಗೃತ ಬಳಗ ಎಣ್ಮೂರು, ಎಸ್ ಡಿ ಎಂ ಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿ ಇವರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಸ.ಹಿ.ಪ್ರಾ. ಶಾಲೆಯಲ್ಲಿ ಅ 26ರಂದು ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ ವಹಿಸಿ ಶುಭ ಹಾರೈಸಿದರು. ಶಿಬಿರದ ಕುರಿತು ಮಾಹಿತಿ ನೀಡಿದ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯಕ್ಕೂ ಒಳ್ಳೆಯದು. ವಿಶೇಷವಾಗಿ ಯುವ ಜನತೆ ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಬೇಕು ಎಂದರು.

ಬೊಬ್ಬೆಕೇರಿ ಸ. ಹಿ.ಪ್ರಾ. ಶಾಲೆಯ ಸಹಶಿಕ್ಷಕ ಜನಾರ್ದನ ಹೇಮಳ ಮಾತನಾಡಿ, ರಕ್ತದಾನವು ಜೀವದಾನಕ್ಕೆ ಸಮಾನ. ನಾವು ನೀಡುವ ರಕ್ತದಿಂದ ಅಪಘಾತಕ್ಕೊಳಗಾದವರಿಗೆ ಹಾಗೂ ತುರ್ತು ಚಿಕಿತ್ಸೆಯಲ್ಲಿರುವ ರೋಗಿಗಳಿಗೆ ಮರುಜೀವ ನೀಡಬಲ್ಲದು ಎಂದರು.

ಬೊಬ್ಬೆಕೇರಿ ಸ. ಹಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹರೀಶ್ ಕಟೀಲು ಪೈಕ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ, ಅಬ್ಬಡ ಉತ್ಸಾಹಿ ಗೆಳೆಯರ ಬಳಗದ ಅಧ್ಯಕ್ಷ ಶರೀಫ್ ಅಬ್ಬಡ ಉಪಸ್ಥಿತರಿದ್ದರು. ರಾಧಾಕೃಷ್ಣ ಹೆಚ್, ಸುಕುಮಾರ್ ಕಲ್ಪಡ, ಸುಜಾತಾ, ರಮೇಶ್ ಆಚಾರ್ಯ, ದಿವಾಕರ ಮರಕ್ಕಡ, ತೀರ್ಥಕುಮಾರ್ ಪೈಕ, ಚಂದ್ರಶೇಖರ ಮೆದು, ಪ್ರಶಾಂತಿ ಸಮಹಾದಿ ಅತಿಥಿಗಳನ್ನು ಗೌರವಿಸಿದರು. ಎಣ್ಮೂರು ವಿವೇಕ ಜಾಗೃತ ಬಳಗದ ಸದಾನಂದ ಪಿ ಸ್ವಾಗತಿಸಿ, ದಿವಾಕರ ಮರಕ್ಕಡ ವಂದಿಸಿದರು. ಶಾಲಾ ಗೌರವ ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here