ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ (ರಿ.), ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಅ. 25ರಂದು ಏಳ್ಮುಡಿಯ ಮಹಾದೇವಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಇದಕ್ಕೂ ಮೊದಲು ದುರ್ಗಾ ಪೂಜೆಯು ನೆರವೇರಿಸಲಾಯಿತು.


ಅಧ್ಯಕ್ಷತೆಯನ್ನು ತೀಯಾ ಸಮಾಜದ ಅಧ್ಯಕ್ಷರಾದ ಸಂತೋಷ್ ಮುರ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ರಾಜೀವ್, ಕಾರ್ಯದರ್ಶಿ ಅಶ್ವಿನಿ ರಾಜೇಶ್, ಕೋಶಾಧಿಕಾರಿ ಬಿ.ಎಂ. ಶ್ರೀಧರ್ ಹಾಗೂ ಗೌರವಾಧ್ಯಕ್ಷ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೀಯಾ ಸಮುದಾಯದ ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ವಿ. ಪ್ರಭಾವತಿ ರಾಜೀವ್, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ನಿರಂಜನ್ ಕೃಷ್ಣ ಹಾಗೂ ಕೋಶಾಧಿಕಾರಿಯಾಗಿ ಬಿ.ಎಂ. ಶ್ರೀಧರ್, ಸಂಘಟನಾ ಕಾರ್ಯದರ್ಶಿ ಯಾಗಿ ಸಂತೋಷ್ ಮುಕ್ರಂಪಾಡಿ ಆಯ್ಕೆಯಾದರು.


ಉಪಾಧ್ಯಕ್ಷರುಗಳಾಗಿ ರಾಜೇಶ್ ಹಿಮ , ಪುರುಷೋತ್ತಮ ಕೇಪುಳು , ಅಶ್ವಿನಿ ರಾಜೇಶ್ , ಪ್ರಭ ,ವಿಜಯ್ ಕುಮಾರ್ ,ಶಶಿಧರ್ ಶೇವಿರೆ ,ಪುರುಷೋತ್ತಮ ಕೊೖಲ ಮತ್ತು ಜೀವನ್ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಗಳಾಗಿ ಟಿ. ರಾಜೀವ್ , ರವೀಂದ್ರ ಸಂಪ್ಯ ,ದಯಾನಂದ ಮುರ ,ಶಶಿಕಲಾ ತೆಂಕಿಲ ,ವೀಕ್ಷಿತಾ ,ರಾಘವ ,ಜೀತನ್ ಆಯ್ಕೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಶ್ಮಿತಾ ದೀಪಕ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಬಿ.ಎಂ. ಶ್ರೀಧರ್ ಲೆಕ್ಕಪತ್ರಗಳನ್ನು ಮಂಡಿಸಿದರು. ಮಲ್ಲಿಕಾ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಸುವರ್ಣಚಂದ್ರಿಕಾ ಸಹಕರಿಸಿದರು. ಆ ಬಳಿಕ ಸಿಹಿ ಭೋಜನ ನೆರವೇರಿತು.

LEAVE A REPLY

Please enter your comment!
Please enter your name here