







ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಜರಗಿದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯ 8ನೇ ತರಗತಿ ವಿದ್ಯಾರ್ಥಿ ನೀಲ್ ನಿಖಿಲ್ ಪ್ರಥಮ ಸ್ಥಾನ ಪಡೆದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ ಎಂದು ಮುಖ್ಯಗುರುಗಳಾದ ಕೆ.ಕೆ ಮಾಸ್ಟರ್ ತಿಳಿಸಿರುತ್ತಾರೆ.
ದೈಹಿಕ ಶಿಕ್ಷಣ ಶಿಕ್ಷಕಿ ಸರೋಜಿನಿ ಎನ್ ಮತ್ತು ಶ್ರೀರಕ್ಷಾ ತರಬೇತಿ ನೀಡಿರುತ್ತಾರೆ. ಇವರು ಚಿಕ್ಕಮುಡ್ನೂರು ಸಾಲ್ಮರ ನಿವಾಸಿ ಹೇಮಚಂದ್ರ ಬಿ.ಎಂ ಮತ್ತು ಸಂಧ್ಯಾ ಕೆ. ದಂಪತಿ ಪುತ್ರ.












