ಬಂಗಾರ್‌ಕಾಯರ್ ಕಟ್ಟೆ ಮಾಜಿ ಸೈನಿಕ ಸುಬೇಧಾರ್ ಭಾಸ್ಕರ್ ಬಿ.ಎಲ್ ನಿಧನ

0

ಪುತ್ತೂರು: ಬಪ್ಪಳಿಗೆ ಬಂಗಾರ್‌ಕಾಯರ್‌ಕಟ್ಟೆ ನಿವಾಸಿ ಮಾಜಿ ಸೈನಿಕ ಸುಬೇಧಾರ್ ಭಾಸ್ಕರ್ ಬಿ.ಎಲ್ (66ವ)ರವರು ಅ.26ರ ರಾತ್ರಿ ನಿಧನರಾದರು.


ಭಾಸ್ಕರ್ ಬಿ.ಎಲ್ ಅವರು ಪುತ್ತೂರು ಮಾಜಿ ಸೈನಿಕ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಫಾದರ್‌ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ನಿಧನರಾದರು. ಮೃತರು ಪತ್ನಿ ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಜಯಂತಿ, ಪುತ್ರ ಅರ್ಜುನ್ ಬಾಸ್ಕರ್, ಪುತ್ರಿ ಅಶಿತಾ ಭಾಸ್ಕರ್, ಸೊಸೆ ಮತ್ತು ಅಳಿಯ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here