







ಪುತ್ತೂರು: ವಿಶೇಷ ಸಮಗ್ರ ಪರಿಷ್ಕರಣೆ(ಎಸ್ ಐ ಆರ್ )- 2026 ಅಭಿಯಾನ ಮುಕ್ತಾಯಗೊಂಡಿದ್ದು,ಇಂದು ಸಂಜೆ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಒಟ್ಟು 4,55,00,0111 ಮತದಾರರಿದ್ದು, ಈ ಪೈಕಿ 2,25,40,493 ಪುರುಷ ಮತದಾರರು ಮತ್ತು 2,29,12,355 ಮಹಿಳಾ ಮತದಾರರು. 2,841 ತೃತೀಯ ಲಿಂಗ ಮತದಾರರಿದ್ದು, 44,322 ಸೇವಾ ಮತದಾರರಿದ್ದಾರೆ. ಸಾಗರೋತ್ತರ ಮತದಾರರ ಸಂಖ್ಯೆ 3,252 ಇದ್ದು 5,65,340 ದಿವ್ಯಾಂಗ ಮತದಾರರಿದ್ದಾರೆ. 18ರಿಂದ 19 ವಯಸ್ಸಿನ 6,83,364 ಮತದಾರಿದ್ದು, 85 ವರ್ಷ ದಾಟಿದ ಮತದಾರರ ಸಂಖ್ಯೆ 3,92,134ರಷ್ಟಿದೆ. ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರ ಸಂಖ್ಯೆಗಿಂತ 3,71,862ರಷ್ಟು ಹೆಚ್ಚಿದೆ.


ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಮುಂದುವರೆದಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ಮತದಾರರು ಅರ್ಜಿ ನಮೂನೆ 6 ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ತೆಗೆದು ಹಾಕಲು ಅರ್ಜಿ ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಬಹುದು . ಹೊಸ ಸಾಗರೋತ್ತರ ಮತದಾರರಾಗಿ ನೊಂದಾಯಿಸಲು ಅರ್ಜಿ ನಮೂನೆ 6ಎ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿನ ವಿವರ, ನಮೂದುಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಅರ್ಜಿ ನಮೂನೆ 8ರ ಮೂಲಕ ಅರ್ಜಿ ಸಲ್ಲಿಸಬಹುದು.ಈ ಮೂಲಕ ನಿವಾಸ ಸ್ಥಳ ಬದಲಾವಣೆ, ನಮೂದುಗಳ ತಿದ್ದುಪಡಿ, ಎಪಿಕ್ ಬದಲಾವಣೆ, ಪಿಡಬ್ಲೂಡಿ ಗುರುತು ದಾಖಲಿಸಬಹುದಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ECINet app ಮೂಲಕ ಲಾಗಿನ್ ಮಾಡಿ ಅಥವಾ https:/voters.eci.gov.in ಗೇ ಭೇಟಿ ನೀಡಬಹುದು.



ಜನ ಪ್ರತಿನಿಧಿಗಳ ಕಾಯ್ದೆ 1950ರ ಕಲಂ 24 ಎ ಹಾಗೂ ಮತದಾರರ ನೋಂದಣಿ ನಿಯಮಗಳು 1960ರ ನಿಯಮ 27ರ ಅನ್ವಯ ಮತದಾರರ ನೋಂದಣಾಧಿಕಾರಿ (ಇಆರ್ ಒ) ನಿರ್ಧಾರದ ವಿರುದ್ದ ಜಿಲ್ಲಾ ದಂಡಾಧಿಕಾರಿಗಳು/ ಜಿಲ್ಲಾಧಿಕಾರಿಗಳ ಮುಂದೆ ಮೊದಲ ಮೇಲ್ಮನವಿ ಸಲ್ಲಿಸಬಹುದು.ಜಿಲ್ಲಾ ದಂಡಾಧಿಕಾರಿಗಳು /ಜಿಲ್ಲಾಧಿಕಾರಿಗಳ ನಿರ್ಧಾರದ ವಿರುದ್ದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಬಹುದು.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೆ ಎಂಬುವುದನ್ನು ಪರಿಶೋಧಿಸಲು ಮಧ್ಯಾಹ್ನ 3ರ ನಂತರ ಭೇಟಿನೀಡಿ.
https://ceo.karnataka.gov.in/en










