ಈಜು ಸ್ಪರ್ಧೆ:ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಸಿಯಾ ಸುಧೀರ್ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ದ.ಕ ಜಿಲ್ಲೆ, ಮಂಗಳೂರು,   ಇದರ  ಆಶ್ರಯದಲ್ಲಿ ಅ 9 ರಂದು ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಮಂಗಳೂರಿನಲ್ಲಿ  ನಡೆದ ‘ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆ 2026 – 27’ ರಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಸಿಯಾ ಸುಧೀರ್ 100 ಮೀ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರು ಪುತ್ತೂರು ನೆಲ್ಲಿಕಟ್ಟೆ ನಿವಾಸಿ ಸುಧೀರ್ ಕುಮಾರ್ ಹಾಗೂ ಪ್ರಮೀಳ ದಂಪತಿಗಳ ಪುತ್ರಿಯಾಗಿರುತ್ತಾರೆ.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ   ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here