ಎಚ್.ಡಿ.ಎಫ್.ಸಿ ಲೈಫ್ ವಿಭಾಗದಲ್ಲಿ ವಿಠಲ ಶೆಟ್ಟಿ ಗೆಣಸಿನಕುಮೇರು ಅವರಿಗೆ “ಉತ್ತಮ ಸೇವಾಸಾಧನಾ” ಪ್ರಶಸ್ತಿ

0

ಕಾಣಿಯೂರು: ಎಚ್ ಡಿ ಎಫ್ ಸಿ ಲೈಫ್ ನ ಬ್ಯಾಂಕ್ ಇನ್ಶೂರೆನ್ಸ್ ಎಲೆಯನ್ಸಸ್ ನಲ್ಲಿ ಸುದೀರ್ಘ ಇಪ್ಪತ್ತು ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ವಿಠಲ ಶೆಟ್ಟಿ ಗೆಣಸಿನಕುಮೇರು ಅವರಿಗೆ ಅ.28ರಂದು Radisson Blu Atria Bangalore ನಲ್ಲಿ ನಡೆಯುವಂತಹ Annual sparsh-2026 ಕಾರ್ಯಕ್ರಮದಲ್ಲಿ ಕಂಪನಿಯ ಎಂ ಡಿ ಸಿ ಇ ಓ ಸಮ್ಮುಖದಲ್ಲಿ ದಂಪತಿ ಸಮೇತ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಪ್ರಸ್ತುತ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಇನ್ಶೂರೆನ್ಸ್ ವಿಭಾಗದಲ್ಲಿ ಸೀನಿಯರ್ ಕಾರ್ಪೊರೇಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ತಮ್ಮ ಉತ್ತಮ ಸಾಧನೆಗಾಗಿ ಥೈಲ್ಯಾಂಡ್, ಮಲೇಶಿಯಾ, ಸಿಂಗಾಪುರ ಮುಂತಾದ ದೇಶಗಳ ಪ್ರವಾಸವನ್ನು ಕೈಗೊಂಡಿದ್ದರು. ಇವರು ಪ್ರಸಿದ್ಧ ಯಕ್ಷಗಾನ ಕಲಾವಿದ ದಿವಂಗತ ಗುಬ್ಯ ರಾಮಯ್ಯ ಶೆಟ್ಟಿ ಮತ್ತು ಗೆಣಸಿನಕುಮೇರು ಪದ್ಮಾವತಿ ಶೆಟ್ಟಿ ದಂಪತಿಗಳ ಸುಪುತ್ರ. ಇದೀಗ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಅಲೇಕಿಯಲ್ಲಿ ಪತ್ನಿ ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಮತ್ತು ಪುತ್ರಿ ವಿವೇಕಾನಂದದಲ್ಲಿ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಕಲಿಯುತ್ತಿರುವ ವಿನ್ಯಾ ವಿ ಶೆಟ್ಟಿಯೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here