ನರೇಂದ್ರ ಪ.ಪೂ. ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

0

ಪುತ್ತೂರು: ಮಹರ್ಷಿ ವಾಲ್ಮೀಕಿಯವರನ್ನು ರಾಮಾಯಣದ ಕರ್ತೃ ಎಂದೂ, ಆದಿಕವಿಯೆಂದೂ ಕರೆಯಲಾಗುತ್ತದೆ. ವಾಲ್ಮೀಕಿ ಜಯಂತಿಯು ಸಂಸ್ಕೃತ ಸಾಹಿತ್ಯ, ಆಧ್ಯಾತ್ಮಿಕ ಬೋಧನೆಗಳು ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವಂತಹ ವಿಶೇಷ ದಿನವಾಗಿದೆ.ಈ ಆಚರಣೆಯು, ಅವರ ಜೀವನ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಬೋಧನೆಗಳ ಬಗ್ಗೆ ಚಿಂತಿಸಲು ಜನರಿಗೆ ಪ್ರೇರೇಪಣೆಯನ್ನು ನೀಡುತ್ತದೆ.ಸಂಸ್ಕೃತ ಕಾವ್ಯಕ್ಕೆ ಮಹರ್ಷಿ ವಾಲ್ಮೀಕಿ ನೀಡಿರುವ ಕೊಡುಗೆಯು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ವಾಲ್ಮೀಕಿ ಜಯಂತಿಯು ಯುವ ಪೀಳಿಗೆಗೆ ಶಾಸ್ತ್ರೀಯ ಸಾಹಿತ್ಯ ಮತ್ತು ಕಥಾ ಪರಂಪರೆಯನ್ನು ಪರಿಚಯಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.ರಾಮಾಯಣದ ಮೌಲ್ಯಗಳನ್ನು ಸ್ಮರಿಸಲು ನಮಗೆ ಸಹಾಯ ಮಾಡುತ್ತದೆ.ರಾಮಾಯಣವು ಕರ್ತವ್ಯ, ನಿಷ್ಠೆ, ಸತ್ಯನಿಷ್ಠೆ, ನ್ಯಾಯ ಮತ್ತು ಕರುಣೆಯಂತಹ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.ಎಲ್ಲದಕ್ಕಿಂತಲೂ ಮುಖ್ಯವಾಗಿ ಆತ್ಮಾವಲೋಕನ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಅರ್ಥಪೂರ್ಣ ಬದಲಾವಣೆಗೆ ದಾರಿ ಮಾಡಿಕೊಡಬಲ್ಲವು ಎಂಬುದನ್ನು ನೆನಪಿಸುತ್ತದೆ.ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ (ಸ್ವಾಯತ್ತ) ಇದರ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾದ ಡಾ. ಮುರಳಿಕೃಷ್ಣ ಟಿ. ಇವರು ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಅಕ್ಟೋಬರ್ 26 ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯನಾಗಿ ಕಾವ್ಯ ಸೃಷ್ಟಿ ಮಾಡಬಲ್ಲ ಎಂಬುದಕ್ಕೆ ವಾಲ್ಮೀಕಿಯ ಜೀವನ ವೃತ್ತಾಂತ ನೈಜ ಉದಾಹರಣೆ ಎಂದು ಹೇಳಿದರು. ಅವರ ಜೀವನ ಸಾಧನೆ ಹಾಗೂ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ವಿದಿಶಾ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here