






ಬೆಟ್ಟಂಪಾಡಿ: ಇಲ್ಲಿನ ಮಿತ್ತಡ್ಕ ಮೇಲಿನಮನೆ ಕೂಟೇಲು ನಾಕಪ್ಪಾಡಿ ದಿ. ಶಿವಪ್ಪ ಗೌಡರ ಪತ್ನಿ ಲಕ್ಷ್ಮಿ (92 ವ.) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ. 28 ರಂದು ಮಧ್ಯಾಹ್ನ ಮಿತ್ತಡ್ಕ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಎಂ.ಟಿ. ಗೌಡ ಮುಂಬಯಿ, ಬೆಟ್ಟಂಪಾಡಿ ಗ್ರಾ.ಪಂ. ನಿಕಟಪೂರ್ವ ಸದಸ್ಯ ಎಂ.ಎಸ್. ಗಂಗಾಧರ ಗೌಡ, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ಜು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಅ. 28 ರಂದು ರಾತ್ರಿ ಮಿತ್ತಡ್ಕದಲ್ಲಿ ಜರಗಲಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.















