ಅ.30: ತಾಯಿ ಮಮತೆ, ಹಾಸ್ಯ, ಪ್ರೇಮಕಥೆ ಹೊತ್ತ ಕರಾವಳಿ ಕಲಾವಿದರ ಕನ್ನಡ ಹಾರರ್ ಸಿನಿಮಾ ‘ಗಾಮಿನಿ’ ಬಿಡುಗಡೆ

0

ಪುತ್ತೂರು, ಸುಳ್ಯದಲ್ಲಿ ಸಂಜೆ ಗಂಟೆ 5 ಕ್ಕೆ ಶೋ

ಪುತ್ತೂರು: ತಾಯಿಯ ಮಮತೆ, ಹಾಸ್ಯ, ಪ್ರೇಮ ಕಥೆಯೊಂದಿಗೆ ಕರಾವಳಿಯ ಕಲಾವಿದರು ನಟಿಸಿರುವ ಕನ್ನಡದ ಹಾರರ್ ಚಲನಚಿತ್ರ ’ಗಾಮಿನಿ’ ಅ.30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಾಯಕ ನಟಿ ಸುಳ್ಯದ ದೊಡ್ಡತೋಟದ ಶ್ರೇಯ ಅವರು ಮಾತನಾಡಿ, ಬೆಳ್ತಂಗಡಿ ಮೂಲದ ಗುರುಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ಒಳ್ಳೆಯ ಕಥೆಯನ್ನು ಹೊಂದಿರುವ ಚಲನಚಿತ್ರವಾಗಿದೆ. ಇದರಲ್ಲಿ ತಾಯಿಯ ಮಮತೆ, ಸುಂದರವಾದ ಪ್ರೇಮದ ಕಥೆ, ಒಳ್ಳೆಯ ಹಾಸ್ಯ ಪ್ರಜ್ಞೆ ಮತ್ತು ಆಕ್ಷನ್ ಸೀನ್ ಇರುವ ಎಮೋಷನಲ್ ಹಾರರ್ ಚಲನ ಚಿತ್ರ ’ಗಾಮಿನಿ’ ಆಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಂಗಳೂರು, ಮಡಿಕೇರಿ ಕಲಾವಿದರೇ ಬಹುತೇಕ ನಟಿಸಿರುವ ಈ ಚಿತ್ರ ಕಷ್ಟ ಪಟ್ಟು ಪ್ರೀತಿಯಿಂದ ಮಾಡಿದರುವ ಚಿತ್ರವಾಗಿದೆ ಎಂದವರು ಹೇಳಿದರು.


ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಬೆಳ್ತಂಗಡಿ ಮೂಲದ ಗುರುಪ್ರಕಾಶ್ ಅವರು ಮಾತನಾಡಿ, ತೀರಾ ಸಸ್ಪೆನ್ಸ್ ಮತ್ತು ಲವ್ ಸ್ಟೋರಿಯಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಸುಮಾರು 25 ದಿನದಲ್ಲಿ ಚಿತ್ರೀಕರಿಸಲಾಗಿದೆ. ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 25 ಮಂದಿ ಕರಾವಳಿಯ ಕಲಾವಿದವರು ನಟಿಸಿದ್ದಾರೆ. ಇದರಲ್ಲಿ ಎರಡು ಹಾಡು ಮತ್ತು ಮೂರು ಪೈಟ್ ಇದೆ ಎಂದವರು. ಚಿತ್ರದ ನಾಯಕ ನಟ ಮಡಿಕೆರಿಯ ಅಂಜನ್ ತಮ್ಮಯ್ಯ ಅವರು ಮಾತನಾಡಿ ಚಿತ್ರವನ್ನು ಎಲ್ಲರು ಬಂದು ವೀಕ್ಷಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಚಿತ್ರ ನಟರಾದ ರಾಜೀವ್ ಬಿ.ಎಚ್, ಉಷಾ ಲಕ್ಷ್ಮಣ ಪೂಜಾರಿ ಬೆಳ್ಳಿಪ್ಪಾಡಿ, ಗಣೇಶ್ ಪೂಜಾರಿ ಅಲಂಗ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.,

LEAVE A REPLY

Please enter your comment!
Please enter your name here