” ನಿರಂತರ 28 ಗಂಟೆ -28 ರಾಜ್ಯಗಳ-28 ಭಾಷೆಗಳಲ್ಲಿ” ಹಾಡಿ ವಿಶ್ವ ದಾಖಲೆ ನಿರ್ಮಾಣಕ್ಕೆ ಮೂಡಬಿದಿರೆ ಪ್ರತಿಭೆ ಯಶವಂತ ಎಂಜಿ ಪಣ!

0

ಬೆಂಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 350 ಹಾಡುಗಳನ್ನು, 28 ಗಂಟೆಗಳ ಕಾಲ ನಿರಂತರವಾಗಿ ಹಾಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಮುಂದಾಗಿದ್ದಾರೆ ಮೂಡಬಿದಿರೆಯವರಾದ, ಕರ್ನಾಟಕದ ಖ್ಯಾತ ಗಾಯಕ ವಿದ್ವಾನ್ ಯಶವಂತ ಎಂಜಿಯವರು.


ಈ ಕಾರ್ಯಕ್ರಮ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಡಾ.ರಾಜ್ ಕುಮಾರ್ ಆಡಿಟೋರಿಯಂನಲ್ಲಿ ಬುಧವಾರ 1 ಗಂಟೆಗೆ ಆರಂಭವಾಗಿದ್ದು, ಗುರುವಾರ 5 ಗಂಟೆಯವರೆಗೆ ನಡೆಯಲಿದೆ. ಗಂಟೆಗೆ ಕೇವಲ 5 ನಿಮಿಷದ ವಿರಾಮ ಅಷ್ಟೇ ಇರುತ್ತದೆ. ಅಲ್ಲದೆ ಒಂದು ಹಾಡಿನಿಂದ ಇನ್ನೊಂದು ಹಾಡು 59 ಸೆಕೆಂಡ್ ನೊಳಗೆ ಆರಂಭಿಸಬೇಕೆಂಬ ನಿಯಮವಿದೆ. ನಿರಂತರ 28 ಗಂಟೆ ಕಾರ್ಯಕ್ರಮವೂ ವಿಡಿಯೋ ರೆಕಾರ್ಡ್ ಆಗುತ್ತಿರುತ್ತದೆ. ಯಶವಂತ್ ಅವರು ಈಗಾಗಲೇ 2 ವಿಶ್ವ ದಾಖಲೆ ಮಾಡಿದ್ದು, ಇದು ಮೂರನೇ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು , ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150 ನೇ ಜನ್ಮದಿನೋತ್ಸವದ ಪ್ರಯುಕ್ತ, “ವಂದೇ ಭಾರತ ಮಾತರಂ” ಎಂಬ ಹೆಸರಲ್ಲಿ ಏಕ್ ಭಾರತ್, ಶ್ರೇಷ್ಠ್ ಭಾರತ್ ಎಂಬ ಆಶಯದಲ್ಲಿ ಜರುಗುತ್ತಿದೆ.

ತಾಳ ಮೇಳಗಳ ಸ್ವರ ಸಂಗಮದಲ್ಲಿ ನಿರಂತರ 28 ಗಂಟೆ, ರಿದಂ ಪ್ಯಾಡ್ ನಲ್ಲಿ ವಾಮನ್ ಕುಮಾರ್, ತಬಲಾದಲ್ಲಿ ಪ್ರಜ್ವಲ್ ಆಚಾರ್ಯ ಹಾಗೂ ದೀಕ್ಷಿತ್ ಕೊಡಂಚ, ಕೀ ಬೋರ್ಡ್ ನಲ್ಲಿ ಮೆಲ್ವಿನ್, ಸಿತಾರ್ ಸುಮುಖ್ ಆಚಾರ್ಯ, ಕೊಳಲಿನಲ್ಲಿ ಗಣೇಶ್ ಕೆಎಸ್ ಹಾಗೂ ವರ್ಷಾ, ಗಿಟಾರ್ ನಲ್ಲಿ ರಾಜ್ ಗೋಪಾಲ್ ಆಚಾರ್ಯ ಅವರಿದ್ದಾರೆ. ಎಲ್ಲರೂ ನಿದ್ದೆ ಇಲ್ಲದೆ, ವಿಶ್ರಾಂತಿ ಇಲ್ಲದೆ ನಿರಂತರ 28. ಗಂಟೆಗಳ ವಿಶ್ವ ದಾಖಲೆಗೆ ಪಣತೊಟ್ಟಿದ್ದಾರೆ‌

ಗಾಯಕ. ವಿದ್ವಾಬ್ ಯಶವಂತ ಅವರು ಮಾತನಾಡಿ ಕಳೆದ ವರ್ಷ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದ ಸಂಗೀತ ಪ್ರೇಮಿಗಳಿಗೆ ಗುರು ಸ್ಥಾನದಲ್ಲಿದಲ್ಲಿದ್ದ ಜೇಸುದಾಸ್ ಹಾಗೂ ಬಾಲಸುಬ್ರಹ್ಮಣ್ಯ ಅವರ ನೆನಪಿನಲ್ಲಿ ಕನ್ನಡ ಗೀತೆಗಳನ್ನು 24 ಗಂಟೆ ಹಾಡಿ ಅರ್ಪಣೆ ಮಾಡಿದ್ದೆ. ಈ ವರ್ಷ ರಾಷ್ಟ್ರಕ್ಕೋಸ್ಕರ ಕೊಡುಗೆ ಕೊಟ್ಟ ಮಹನೀಯರ‌್ನು ನೆನಪಿಸುವ ಸಂಕಲ್ಪ ಮಾಡಿದ್ದೆ‌. ಪಟೇಲ್ ಅವರು ಭದ್ರ ಭಾರತಕ್ಕೆ ಅಡಿಪಾಯ ಹಾಕಿದವರು. ಚದುರಿಹೋಗಿದ್ದ ಭಾರತವನ್ನು 28 ರಾಜ್ಯಗಳಡಿ ಒಟ್ಟುಗೂಡಿಸಿದವರು. ರಾಷ್ಟ್ರಭಕ್ತ ಸರ್ಧಾರ ವಲ್ಲಭಬಾಗಿ ಪಟೇಲರ ನೆನಪಿನಲ್ಲಿ ಅ.31 ರಂದು 150 ನೇ ವರ್ಷಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ,ಭಾಷೆಯ ಮೂಲಕ ಸಂಗೀತದ ಮೂಲಕ ಒಟ್ಟುಗೂಡಿಸಲು 28 ಗಂಟೆ ಹಾಡಲು ಸಂಕಲ್ಪ ಮಾಡಿ, ಸಾಮರಸ್ಯ, ಶಾಂತಿ ಸೌಹಾರ್ದತೆಯೊಂದಿಗೆ, ವಂದೇ ಭಾರತ ಮಾತರಂ ಹೆಸರಲ್ಲಿ ಮಾಡುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಗೋಪಾಲಯ್ಯ, ಸಂಗೀತ ನಿರ್ದೇಶಕರಾದ ವಿ ಮನೋಹರ್, ಮೂಡಬಿದ್ರೆ ನಗರ ಸಭೆ, ಮೂಡಬಿದಿರೆ ಮಂಡಲದ ಸದಸ್ಯರಾದ ಪುರಂದರ ದೇವಾಡಿಗ, ಧ್ವನಿ ಮತ್ತು ಬೆಳಕು ಅಧ್ಯಕ್ಷರಾದ ಸುಶಾಂತ್ ಭಂಡಾರಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಏಷ್ಯನ್ ಹೆಡ್ ಡಾ.ಮನೀಶ್ ವಿಷ್ಞೋಯಿ, ಪತ್ರಕರ್ತ ಸತೀಶ್ ಮುಳ್ಳೂರು, ಉಡುಪಿ ಬಿಜೆಪಿ ಘಟಕದ ಅಧ್ಯಕ್ಷರಾದ, ಮಹೇಶ್ ಠಾಕೂರ್, ಉಡುಪಿಯ ಶ್ರೀರಂಗ ಕನ್ಸ್ಟ್ರಕ್ಷನ್ ನ ರಾಘವೇಂದ್ರ ಆಚಾರ್ಯ, ಶಶಿಕಲಾ ಪ್ರಭಾಕರ್ ಆಚಾರ್ಯ, ಹಾಗೂ ಸಂಗೀತ ಶ್ರೀಮತಿ ಮಂಜುಳಾ ಭಾಗವಹಿಸಿದ್ದರು. ಪುರಂದರ ದೇವಾಡಿಗ ಅವು ಮಾತನಾಡಿ, ಯಶವಂತ್ ಅವರ ಮೂಡಬಿದ್ರೆಯ ಮಾಣಿಕ್ಯ. ಎಲ್ಲಾ ಅಡತಡೆಗಳನ್ನು ಮೆಟ್ಟಿನಿಂತು ಸಾಧನೆ ಮಾಡುವವರು ಎಂದರು.

ಪತ್ರಕರ್ತ ಸತೀಶ್ ಮುಳ್ಲೂರು ಮಾತನಾಡಿ, ಇತಿಹಾಸದಲ್ಲಿರುವುದು ರಾಜರು ಕಲೆ ಸಾಹಿತ್ಯಕಾರರು ಮಾತ್ರ. ಇವರ ಹೆಸರು ಅಜರಾಮರವಾಗಿರುತ್ತದೆ. ಹಾಗೆಯೇ ಯಶವಂತರವರ ಈ ಸಾಧನೆ ದಾಖಲೆಯಾಗಿರುತ್ತದೆ ಎಂದರು.


ಡಾ.ಮನೀಷ್ ವಿಷ್ಞೋಯಿ, ಏಷ್ಯಾ ಹೆಡ್ , ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ , ಅವರು ಮಾತನಾಡಿ, ದೇಶವು 28 ರಾಜ್ಯಗಳನ್ನು ಹೊಂದಿದೆ, ದೇಶ ಒಗ್ಗೂಡಿ ಇದೆ ಅಂದರೆ ಅದಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾರಣ. ಈಗಾಗಲೇ 2 World record holder ಹಾಗೂ ವಿದ್ವಾನ್ ಆಗಿರುವ ಯಶವಂತ್ ಅವರಿಗೆ ಸಂಗೀತದ ಬಗ್ಗೆ ಸಾಕಷ್ಟು ಜ್ಞಾನ ಇದೆ. ನನಗೆ ಕನ್ನಡ ಬರುವುದಿಲ್ಲ. ಆದರೆ ಅವರ ಸ್ವರ, ತುಂಬಾ ಚೆನ್ನಾಗಿದೆ. 20% ಮಾತ್ರ ನನಗೆ ಕನ್ನಡ ಅರ್ಥವಾಗುತ್ತದೆ. ಆದರೆ ಯಶವಂತ ಅವರು 28 ಭಾಷೆಗಳನ್ನು ಒಂದೊಂದು ಗಂಟೆ ಹಾಡಲಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್ ಎಂದರು.
ವಿದ್ವಾನ್ ಮುರಳೀಧರ್ ಜೋಶಿ ಸಂಗೀತ ವಿದ್ವಾಂಸರು ಮಾತನಾಡಿ, ಯಶವಂತ್ ಅವರು ಶ್ರೀ ಕೆ ಮಾಧವ ಆಚಾರ್ಯರ ನಿಕಟ ಶಿಷ್ಯ. 25-30 ವರ್ಷದ ಹಿಂದೆ ಇದ್ದಂತೆಯೇ ವಿನಯವಂತಿಕೆ ಹೊಂದಿದ್ದಾರೆ. ಪ್ರತೀ ಹಂತದಲ್ಲಿ ಕಲಿಯುವ ಅಪೇಕ್ಷೆ ಉಳ್ಳವರು. ಮಂಗಳೂರಲ್ಲಿ 24 ಗಂಟೆ ಹಾಡಿ ದಾಖಲೆ ನಿರ್ಮಿಸಿದ್ದವರು, ಇಂದು ವಂದೇ ಭಾರತ ಮಾತರಂ ಕಾರ್ಯಕ್ರಮದಲ್ಲಿ ನಿರಂತರವಾಗಿ ಹಾಡಿ ಏಕ ಭಾರತ್ ಶ್ರೇಷ್ಠ ಭಾರತ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿರುವ ಯಶವಂತ್ ಅವರಿಗೆ ಶುಭಾಶಯಗಳು ಎಂದು ತಿಳಿಸಿದರು.


ಸಂಗೀತ. ನಿರ್ದೇಶಕರಾದ -ವಿ ಮನೋಹರ್ ಮಾತನಾಡಿ, ಎಲ್ಲಾ ಸಂಗೀತಾಸಕ್ತರ ಪ್ರೋತ್ಸಾಹ, ಆಶೀರ್ವಾದ ಯಶವಂತ್ ಎಂ ಜಿ ಅವರ ಮೇಲಿರಲಿ. 28 ರಾಜ್ಯಗಳ 28 ಭಾಷೆಗಳಲ್ಲಿ ಹಾಡುತ್ತಿರುವ ಯಶವಂತವರಿಗೆ ಯಶಸ್ವಿಯಾಗಲಿ ಎಂದರು. ಕೆ.ಗೋಪಾಲಯ್ಯ ಅವರು ಮಾತನಾಡಿ, ಉಕ್ಕಿನ ಮನುಷ್ಯ ಸರ್ಧಾರ ವಲ್ಲಭಬಾಯಿ ಪಟೇಲರ 150 ನೇ ಜನ್ಮದಿನೋತ್ಸವದ ಪ್ರಯುಕ್ತ, ಈ ವಿಶ್ವದಾಖಲೆ ನಿರ್ಮಾಣ ಮಾಡಲು ಹೊರಟಿರುವ ತಂಡಕ್ಕೆ ಅಭಿನಂದನೆಗಳು ಎಂದರು.

LEAVE A REPLY

Please enter your comment!
Please enter your name here