ರಾಮಕುಂಜ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಟಿ ಅಮಾವಾಸ್ಯೆ ಆಚರಣೆ

0

ರಾಮಕುಂಜ: ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಜು.೨೮ರಂದು ಆಟಿ ಅಮಾವಾಸ್ಯೆ ಆಚರಿಸಲಾಯಿತು.


ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು. ಬಳಿಕ ಆಟಿ ತಿಂಗಳಿ ವಿಶೇಷ ಖಾದ್ಯಗಳಾದ ನೆಲನೆಲ್ಲಿ ಗಿಡ ಕಷಾಯ, ಪಾಲೆಕೆತ್ತೆ ಕಷಾಯ, ಕುಂಟೋಲು ಕಾಪಿ, ಕಡೀರಬೇರಿನ ಕಷಾಯ, ಪುನರ್ಪುಳಿ ಸಾರು, ನುಗ್ಗೆ ಸೊಪ್ಪು ಸಾರು, ಚೀಮುಳ್ಳು ಸಾರು, ಲಿಂಬೆಹಣ್ಣು ಸಾರು, ಜಾರಿಗೆ ಪುಳಿ ಸಾರು, ಮಂತುಪುಳಿ ಸಾರು, ಅಂಬಡೆ ಉಪ್ಪಿನಕಾಯಿ, ಪತ್ರೊಡೆ, ಕರಂಡೆಕಾಯಿ ಉಪ್ಪಿನಕಾಯಿ, ಹಲಸಿನಗಟ್ಟಿ, ಹಲಸಿನ ಹಣ್ಣು ಪಾಯಸ, ಅರಶಿನ ಎಲೆ ಗಟ್ಟಿ, ಮಾಂಬಲಗೊಜ್ಜು, ಮಾವಿನಹಣ್ಣು ರಸಾಯನ, ನನ್ನೆರಿ, ಬಾಳೆಹಣ್ಣು ರಸಾಯನ, ಹಾಲುಬಾಯಿ ಮಣ್ಣಿ, ಆಟಿ ಪಾಯಸ, ತಜಂಕ್‌ಕಣಿಲೆ ದೋಸೆ, ಕೇಸುಎಲೆ ಚಟ್ನಿ, ಪೇರಡ್ಯೆ ಪಾಯಸ, ಕೆತ್ತೆ ಪುಳಿಚಟ್ನಿ, ಕೇಸು ಸೊಪ್ಪಿನ ವಡೆ, ಚಂಗುಳಿ(ಪೆಲಕಯಿದ ಉಪ್ಪುಕರಿ), ತುಪ್ಪ ಕೆರೆಂಗ್ ಗಸಿ, ಸುನೆ ಕೆರೆಂಗ್ ಗಸಿ, ಚೇವುದ ಕಂಡೆ ಗಸಿ, ಚೀಪೆ ಕೆರೆಂಗ್ ಉಪ್ಪುಕರಿ, ಪುಂಡಿಕೇನೆ ಗಸಿ, ಅಡ್ಕರೆ ಪಲ್ಯ, ಹಾಗಲಕಾಯಿ ಪಲ್ಯ, ನೇಂದ್ರೆ ಬಾರೆ ಚಿಪ್ಸ್, ನೀರುಕುಕ್ಕು ಪಲ್ಯ, ತಜಂಕ್ ಪೆಲತ್ತರಿ ಪಲ್ಯ, ಮೊಳಕೆ ಬರಿಸಿದ ಹೆಸರುಕಾಳು ಕೋಸಂಬರಿ, ಬಾಳೆದಿಂಡು ಪಲ್ಯ, ಪುದೀನ ಸೊಪ್ಪು ಚಟ್ನಿ, ಪೂಂಬೆ ಚಟ್ನಿ, ಹಾಗಲಕಾಯಿ ಅಂಬಡೆ ಪಲ್ಯ, ಸೇರೆಕೊಡಿ ಚಟ್ನಿ, ತಿಮರೆ ಚಟ್ನಿ, ಕುಡು ಚಟ್ನಿ, ಮರತೊಂಡೆ ಪಲ್ಯ, ಉಪ್ಪಡ್ ಪಚ್ಚಿಲ್ ಪಲ್ಯ, ಉಪ್ಪಡ್ ಪಚ್ಚಿಲ್ ಉಂಡ್ಲುಂಗ, ಪೆಲಕ್ಕಾಯಿದ ಗೋಳಿಬಜೆ, ಮರ ಕೆರೆಂಗ್ ಚಿಪ್ಸ್, ಬಾರೆದ ಕಾಯಿದ ಉಪ್ಪುಕರಿ, ಮರ ಕೆರೆಂಗ್ ಉಪ್ಪುಕರಿ, ಅನ್ನ, ಸೇರೆ ಕೆತ್ತೆ ಗಂಜಿ, ಮೆತ್ತೆ ಗಂಜಿ, ಪೆಲಕ್ಕಾಯಿದ ಮಾಂಬಲದ ಗೊಜ್ಜು, ಸಾಂಬ್ರಾಣಿ ತಂಬುಲಿ, ಪುದೇಲು ಕೇನೆ ಕೊದ್ಯೊಲು, ನೆಲ್ಲಿಂಡಿ ತಂಬುಲಿ, ಅನಾನಸು ಮೆಣಸಿನಕಾಯಿ, ಕಣಿಲೆ ಹೆಸರುಕಾಳು ಕಾಯಿಹುಳಿ, ಸೌತೆ ತೇಟ್ಲ ಸಾಂಬಾರು, ಸಾಸಿವೆ ಕಾಡುಪೀರೆ, ಚೇಬುಬಲ್ಲ್ ಕೊದ್ಲು ಮುಂತಾದ ೬೫ ಬಗೆಯ ಖಾದ್ಯಗಳ ಊಟೋಪಚಾರ ನೀಡಲಾಯಿತು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಿತು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ವಸತಿ ನಿಲಯದ ವ್ಯವಸ್ಥಾಪಕ ರಮೇಶ್ ರೈ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಲೋಹಿತ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧನ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ದನ ಬಿ.ಎಲ್., ಉಪಾಧ್ಯಕ್ಷ ಇಂದುಶೇಖರ ಶೆಟ್ಟಿ, ನೇತ್ರಾವತಿ ತುಳುಕೂಟದ ಸದಸ್ಯ ಜಯರಾಜ್, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಉಪ್ಪಿನಂಗಡಿಯ ವೈದ್ಯಾಧಿಕಾರಿ ಡಾ.ನಿರಂಜನ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾಲಾ ವಿದ್ಯಾರ್ಥಿಗಳ, ವಸತಿ ನಿಲಯದ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೩ ಸಾವಿರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here