ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಪ್ರಥಮ ತ್ರೈವಾರ್ಷಿಕ ಮಹಾಸಭೆ

0

  • ಅಧ್ಯಕ್ಷರಾಗಿ ನಾರಾಯಣ ರೈ ಕೊಪ್ಪಳ, ಕಾರ್ಯದರ್ಶಿಯಾಗಿ ಕುಮಾರ ನರಸಿಂಹ ಭಟ್, ಕೋಶಾಧಿಕಾರಿಯಾಗಿ ಪದ್ಮನಾಭ ಬೋರ್ಕರ್ ಆಯ್ಕೆ

 

ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ತ್ರೈವಾರ್ಷಿಕ ಮಹಾಸಭೆ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಇವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಭಾವನದಲ್ಲಿ ಜು.31 ರಂದು ಜರಗಿತು. ದೇವಸ್ಥಾನದ ತ್ರೈವಾರ್ಷಿಕ ವರದಿ ಹಾಗೂ ಜಮಾ ಖರ್ಚಿನ ವಿವರವನ್ನು ಜತೆ ಕಾರ್ಯದರ್ಶಿ ಕುಮಾರ ನರಸಿಂಹ ಭಟ್ ವಾಚಿಸಿದರು.

 

ನೂತನ ಆಡಳಿತ ಮಂಡಳಿಯ ರಚನೆ

ಮುಂದಿನ ಮೂರು ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ನಿಕಟಪೂರ್ವ ಕಾರ್ಯದರ್ಶಿ ನಾರಾಯಣ ರೈ ಕೊಪ್ಪಳ, ಕಾರ್ಯದರ್ಶಿಯಾಗಿ ನಿಕಟಪೂರ್ವ ಜತೆ ಕಾರ್ಯದರ್ಶಿ ಕುಮಾರ ನರಸಿಂಹ ಭಟ್, ಕೋಶಾಧಿಕಾರಿಯಾಗಿ ಪದ್ಮನಾಭ ಬೋರ್ಕರ್ .ಬಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರಮೋದ್   ಕುಮಾರ್ ಆರಿಗ ನಿಡ್ಪಳ್ಳಿ ಗುತ್ತು, ವಾಸುದೇವ ಭಟ್ ಮುಂಡೂರು, ನಾಗೇಶ ಗೌಡ ಪುಳಿತ್ತಡಿ, ದಿವ್ಯಾ.ಕೆ ಶೆಟ್ಟಿ ಪುತ್ತೂರು, ತಿಮ್ಮಣ್ಣ ರೈ ಆನಾಜೆ, ಶಿವಪ್ಪ ಪೂಜಾರಿ ನುಳಿಯಾಲು, ರಾಮಚಂದ್ರ ಮಣಿಯಾಣಿ ಬೊಳುಂಬುಡೆ ಇವರನ್ನು ಸದಸ್ಯರುಗಳನ್ನಾಗಿ ನೇಮಿಸಲಾಯಿತು. ದೇವಸ್ಥಾನದಲ್ಲಿ ಮುಂದೆ ಆಗ ಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಅರ್ಚಕರಿಗೆ ವಸತಿ ಗೃಹ ನಿರ್ಮಾಣ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಗೃಹ ನಿರ್ಮಾಣಕ್ಕೆ ಅರ್ಥಿಕ ಕ್ರೊಡೀಕರಣ ಮಾಡುವ ಬಗ್ಗೆ ಚರ್ಚಿಸಿದಾಗ ಕೆಲವರು ಅಲ್ಲಿಯೇ ವಾಗ್ದಾನ ಮಾಡಿದರು.ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ  ಗ್ರಾಮಸ್ಥರ ಸಹಕಾರವನ್ನು ಈ ಸಂದರ್ಭದಲ್ಲಿ ಕೇಳಿ ಕೊಳ್ಳಲಾಯಿತು. ವಾಸುದೇವ ಭಟ್ ಪ್ರಾರ್ಥಿಸಿ, ಪದ್ಮನಾಭ ಬೋರ್ಕರ್ ಸ್ವಾಗತಿಸಿ, ಕುಮಾರ ನರಸಿಂಹ ಭಟ್ ವಂದಿಸಿದರು. ಗ್ರಾಮಸ್ಥರು ಪಾಲ್ಗೊಂಡರು.

LEAVE A REPLY

Please enter your comment!
Please enter your name here