ಅಧ್ಯಕ್ಷ: ಜಗದೀಶ ಎ, ಪ್ರ.ಕಾರ್ಯದರ್ಶಿ: ಪುರುಷೋತ್ತಮ ಆಚಾರ್ಯ
ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಆಚಾರ್ಯ ನನ್ಯರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ.21ರಂದು ಮದ್ಲ ನಿನಾದ ಸಭಾಂಗಣದಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆಪ್ರಕ್ರಿಯೆ ನಡೆಸಲಾಯಿತು.
ಯುವಕ ಮಂಡಲದ ನೂತನ ನೂತನ ಅಧ್ಯಕ್ಷರಾಗಿ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷರಾಗಿ ಶ್ರೀಕುಮಾರ್ ಬಲ್ಯಾಯ, ಜತೆಕಾರ್ಯದರ್ಶಿಯಾಗಿ ಹರ್ಷ ಎ.ಆರ್, ಕೋಶಾಧಿಕಾರಿಯಾಗಿ ಹರೀಶ್ ಕೆರೆಮೂಲೆ, ಸಂಘಟನಾ ಕಾರ್ಯದರ್ಶಿಯಾಗಿ ರಾಮಣ್ಣ ನಾಯ್ಕ ಆಚಾರಿಮೂಲೆಯವರನ್ನು ಆಯ್ಕೆ ಮಾಡಲಾಯಿತು. ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಆಯ್ಕೆ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಿ, ಸಂಘದ ನಿರ್ಣಯ ಪುಸ್ತಕ ನೀಡಿ, ಪ್ರತಿಜ್ಞಾ ವಿಧಿ ಭೋಧಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರ ಪರಿಚಯ:
ಮಾಡ್ನೂರು ಗ್ರಾಮದ ಆಚಾರಿಮೂಲೆ ನಿವಾಸಿಯಾಗಿರುವ ಜಗದೀಶ ನಾಯ್ಕರವರು ತುಡರ್ ಯುವಕ ಮಂಡಲದ ಆರಂಭಿಕ ಸದಸ್ಯನಾಗಿದ್ದು, ಕಳೆದ ೧೧ ವರ್ಷದ ಅವಧಿಯಲ್ಲಿ ಯುವಕ ಮಂಡಲದಲ್ಲಿ ೮ ವರ್ಷಗಳ ಕಾಲ ವಿವಿಧ ಜವಾಬ್ದಾರಿಯಲ್ಲಿ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ, ಯುವಕ ಮಂಡಲದಲ್ಲಿ ತನ್ನ ಅತ್ಯುತ್ತಮ ಕಾರ್ಯಸಾಧನೆಗಾಗಿ ೨೦೧೭ರಲ್ಲಿ ತುಡರ್ ಯುವ ಪ್ರಶಸ್ತಿಗೆ ಭಾಜನರಾಗಿದ್ದರು. ಉತ್ತಮ ಭಜನಾಪಟುವಾಗಿರುವ ಜಗದೀಶ ನಾಯ್ಕರವರು ಸಿಡ್ಕೋ ಸಹಕಾರ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.
ಪ್ರ.ಕಾರ್ಯದರ್ಶಿಯವರ ಪರಿಚಯ:
ಮಾಡ್ನೂರು ಗ್ರಾಮದ ನನ್ಯ ನಿವಾಸಿಯಾಗಿರುವ ಪುರುಷೋತ್ತಮ ಆಚಾರ್ಯರವರು ತುಡರ್ ಯುವಕ ಮಂಡಲದ ಆರಂಭಿಕ ಸದಸ್ಯನಾಗಿದ್ದು, ಕಳೆದ ೧೧ ವರ್ಷದ ಅವಧಿಯಲ್ಲಿ ಕೋಶಾಧಿಕಾರಿಯಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ, ತನ್ನ ಸಾಂಸ್ಕೃತಿಕ ಕಾರ್ಯದರ್ಶಿಯ ಅವಧಿಯಲ್ಲಿ ತಾಲೂಕು, ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ತಂಡವನ್ನು ಸಕ್ರಿಯವಾಗಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ, ಯುವಕ ಮಂಡಲದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ಗ್ರಾಮೀಣ ಭಾಗದಲ್ಲಿ ಯುವಕ ಮಂಡಲದ ಸದಸ್ಯರಿಂದಲೇ ತುಳುನಾಡ ವೈಭವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹವ್ಯಾಸಿ ಕಲಾವಿದರು ಆಗಿರುವ ಪುರುಷೋತ್ತಮ ಆಚಾರ್ಯರವರು ಅಲ್ಯೂಮಿನಿಯಂ ಫ್ಯಾಭ್ರಿಕೇಷನ್ ವೃತ್ತಿಯನ್ನು ಮಾಡುತ್ತಿದ್ದಾರೆ.
ಮಹಾಸಭೆಯಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಗಂಗಾಧರ ನಾಯ್ಕ, ಸುನೀಲ್ ನಿಧಿಮುಂಡ, ನಿರ್ಗಮಿತ ಅಧ್ಯಕ್ಷ ನವೀನ ಎನ್, ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಯುವಕ ಮಂಡಲದ ಸದಸ್ಯರಾದ ನಿರಂಜನ ರಾವ್, ಬಾಲಕೃಷ್ಣ ಪಾಟಾಳಿ ನನ್ಯ, ರಾಜೇಶ್ ಬಿ, ರಾಘವ ಪಿ.ಎಸ್, ಸತೀಶ ಮದ್ಲ, ಭವಿತ್ ರೈ, ಯಜಿತ್ ಆಚಾರಿಮೂಲೆ, ಶ್ರೀಕಾಂತ್ ಎಂ, ತಿರುಮಲೇಶ ಮಿನೋಜಿಕಲ್ಲು, ಸುರೇಶ ಮಾಣಿಯಡ್ಕ, ಸಂದೇಶ್ ಚಾಕೋಟೆ, ಲಿಂಗಪ್ಪ ನನ್ಯ, ದಿವ್ಯಪ್ರಸಾದ್ ಎ.ಎಂ ಉಪಸ್ಥಿತರಿದ್ದರು.
ಸದಸ್ಯರಾದ ಹರ್ಷಿತ್ ಎ.ಆರ್ ಸ್ವಾಗತಿಸಿ, ಮೋಹನಚಂದ್ರ ವಂದಿಸಿದರು.