ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫಿಲೋಮಿನಾದ ಸಹನಾ ಪ್ರಿಯ, ಮೊಹಮದ್ ರಿಜಾಸ್‌ರವರಿಗೆ ಬೆಳ್ಳಿ ಪದಕ

0

ಪುತ್ತೂರು: ಮಂಗಳೂರಿನ ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ(ಪಿಸಿಎಂಬಿ) ವಿಭಾಗದ ವಿದ್ಯಾರ್ಥಿನಿ ಸಹನಾ ಪ್ರಿಯ ಹಾಗೂ ಪ್ರಥಮ ವಾಣಿಜ್ಯ(ಎಸ್‌ಸಿಬಿಎ) ವಿಭಾಗದ ವಿದ್ಯಾರ್ಥಿ ಮೊಹಮದ್ ರಿಜಾಸ್‌ರವರಿಗೆ ಬೆಳ್ಳಿ ಪದಕ ಲಭಿಸಿದೆ.

ಸಹನಾ ಪ್ರಿಯರವರು ಪಡ್ನೂರು ರಾಮನಗರ ನಿವಾಸಿ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ ಹಾಗೂ ಚೆರುಪುಷ್ಪರವರ ಪುತ್ರಿಯಾಗಿದ್ದು ಇವರಿಗೆ ಕರಾಟೆ ಶಿಕ್ಷಕ ಟಿ.ಡಿ ತೋಮಸ್‌ರವರು ತರಬೇತಿ ನೀಡುತ್ತಿದ್ದಾರೆ. ಮೊಹಮದ್ ರಿಜಾಸ್‌ರವರು ಸುಳ್ಯ ಮುರುಳ್ಯ ನಿವಾಸಿ ಅಬ್ದುಲ್ ರಶೀದ್ ಹಾಗೂ ಸಾಹಿರಾರವರ ಪುತ್ರರಾಗಿದ್ದು, ಇವರಿಗೆ ಕರಾಟೆ ಶಿಕ್ಷಕ ದಿನೇಶ್ ಎಂ.ಬಿರವರು ತರಬೇತಿ ನೀಡುತ್ತಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here