ಏಷ್ಯಾಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತಕ್ಕೆ ಜಯ | ಭಾರತದಾದ್ಯಂತ ಸಂಭ್ರಮಿಸಿದ ಕ್ರಿಕೆಟ್‌ ಅಭಿಮಾನಿಗಳು | ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

0

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆ. 28ರಂದು ನಡೆದ ಏಷ್ಯಾಕಪ್ ಟಿ20 ಎರಡನೇ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಗೆಲುವಿನೊಂದಿಗೆ ಧೂಳಿಪಟಗೊಳಿಸಿದೆ.

ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ರನ್‌ಗಳಿಸಲು ಪರದಾಡಿದ ಪಾಕ್‌ 10 ಓವರ್‌ಲ್ಲಿ 67-2 ವಿಕೇಟ್‌ ಕಳೆದುಕೊಂಡು ಆಟವಾಡುತ್ತಿತ್ತು. ಪವರ್‌ ಪ್ಲೇಯಲ್ಲಿ ಪಾಕ್‌ ಸ್ಕೋರ್‌ 2 ವಿಕೆಟಿಗೆ 43 ರನ್‌. ನಂತರ ಹಾರ್ದಿಕ್ ಪಾಂಡ್ಯ (3), ಭುವನೇಶ್ವರ್ ಕುಮಾರ್(4), ಸೇರಿದಂತೆ ಭಾರತದ ಬೌಲರ್‌ಗಳ ಸಂಘಟಿತ ದಾಳಿಯಿಂದ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಭಾರತದ ಗೆಲುವಿಗೆ 148 ರನ್‌ಗಳ ಗುರಿ ನೀಡಿತು. ಬಳಿಕ ಆರಂಭಿಕರಾಗಿ ರೋಹಿತ್-ರಾಹುಲ್‌ ಆಗಮಿಸಿದಾದರೂ ರಾಹುಲ್‌ (0)ಗೆ ವಿಕೇಟ್‌ ಒಪ್ಪಿಸಿದರು. ರೋಹಿತ್‌ (12̧) ವಿರಾಟ್ ಕೊಹ್ಲಿ (35), ಜಡೇಜಾ (35), ಸೂರ್ಯಕುಮಾರ್‌ ಯಾದವ್‌ (18), ಹಾರ್ದಿಕ್ ಪಾಂಡ್ಯ (33) ಸಮಾನಾಂತರ ಆಟ ತಂಡದ ಗೆಲುವಿಗೆ ಕಾರಣರಾದರು. ಕೊನೆಯ ‌ಓವರ್ ಮುಕ್ತಾಯಕ್ಕೆ 2 ಬಾಲ್ ಉಳಿದಿರುವಾಗಲೇ 5 ವಿಕೆಟ್ ನಷ್ಟಕ್ಕೆ 148 ಗುರಿ ಸಾಧಿಸಿತು. ಹಾರ್ದಿಕ್‌ ಪಾಡ್ಯರ ಆಲ್‌ರೌಂಡರ್‌ ಪ್ರದರ್ಶನ ಭಾರತವನ್ನು ಗೆಲುವನ್ನು ಸಾಧಿಸಲು ಕಾರಣವಾಯಿತು. ಭಾರತವು ವಿಕೆಟ್ ಕೀಪರ್ ಆಯ್ಕೆಯಲ್ಲಿ ಭಾರತ ರಿಷಬ್ ಪಂತ್ ಹೊರಗಿಟ್ಟು ದಿನೇಶ್ ಕಾರ್ತಿಕ್ ರನ್ನು ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು.

 

ವಿರಾಟ್‌ಕೊಹ್ಲಿ: ಟಿ20 ಪಂದ್ಯಗಳ “ಶತಕ’
ವಿರಾಟ್‌ ಕೊಹ್ಲಿ ಅವರ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಕೊಹ್ಲಿ ಈ ಮೈಲುಗಲ್ಲು ನೆಟ್ಟ ಭಾರತದ ಮೊದಲ ಕ್ರಿಕೆಟಿಗ. ಇದರೊಂದಿಗೆ ವಿರಾಟ್‌ ಕೊಹ್ಲಿ ಮೂರೂ ಮಾದರಿಗಳಲ್ಲಿ 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದಂತಾಯಿತು. 102 ಟೆಸ್ಟ್‌ ಹಾಗೂ 261 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

ದೇಶದ ವಿವಿಧೆಡೆ ಸಂಭ್ರಮ, ಟೀಂ ಇಂಡಿಯಾಗೆ ಮೋದಿ, ರಾಹುಲ್‌ ಗಾಂಧಿ ಅಭಿನಂದನೆ:

ದೇಶಾದ್ಯಂತ ಈ ಜಯವನ್ನು ಭಾರತೀಯರು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಭಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಕೋರ್‌ ಪಟ್ಟಿ
ಪಾಕಿಸ್ಥಾನ

ಮೊಹಮ್ಮದ್‌ ರಿಜ್ವಾನ್‌ ಸಿ ಆವೇಶ್‌ ಬಿ ಪಾಂಡ್ಯ 43
ಬಾಬರ್‌ ಆಜಂ ಸಿ ಆರ್ಷದೀಪ್‌ ಬಿ ಭುವನೇಶ್ವರ್‌ 10
ಫ‌ಕರ್‌ ಜಮಾನ್‌ ಸಿ ಕಾರ್ತಿಕ್‌ ಬಿ ಆವೇಶ್‌ 10
ಇಫ್ತಿಕಾರ್‌ ಅಹ್ಮದ್‌ ಸಿ ಕಾರ್ತಿಕ್‌ ಬಿ ಪಾಂಡ್ಯ 28

ಖುಷ್ದಿಲ್ ಶಾ ಸಿ ಜಡೇಜ ಬಿ ಪಾಂಡ್ಯ 2
ಶದಾಬ್‌ ಖಾನ್‌ ಎಲ್‌ಬಿಡಬ್ಲ್ಯು ಭುವನೇಶ್ವರ್‌ 10
ಆಸಿಫ್ ಅಲಿ ಸಿ ಯಾದವ್‌ ಬಿ ಭುವನೇಶ್ವರ್‌ 9
ಮೊಹಮ್ಮದ್‌ ನವಾಜ್‌ ಸಿ ಕಾರ್ತಿಕ್‌ ಬಿ ಆರ್ಷದೀಪ್‌ 1
ಹ್ಯಾರಿಸ್‌ ರವೂಫ್ ಔಟಾಗದೆ 13
ನಸೀಮ್‌ ಶಾ ಎಲ್‌ಬಿಡಬ್ಲ್ಯು ಭುವನೇಶ್ವರ್‌ 0
ಶಹನವಾಜ್‌ ದಹಾನಿ ಬಿ ಆರ್ಷದೀಪ್‌ 16
ಇತರ 5
ಒಟ್ಟು (19.5 ಓವರ್‌ಗಳಲ್ಲಿ ಆಲೌಟ್‌) 147
ವಿಕೆಟ್‌ ಪತನ: 1-15, 2-42, 3-87, 4-96, 5-97, 6-112, 7-114, 8-128, 9-128.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-26-4
ಆರ್ಷದೀಪ್‌ ಸಿಂಗ್‌ 3.5-0-33-2
ಹಾರ್ದಿಕ್‌ ಪಾಂಡ್ಯ 4-0-25-3
ಆವೇಶ್‌ ಖಾನ್‌ 2-0-19-1
ಯಜುವೇಂದ್ರ ಚಹಲ್‌ 4-0-32-0
ರವೀಂದ್ರ ಜಡೇಜ 2-0-11-0
ಭಾರತ
ರೋಹಿತ್‌ ಶರ್ಮ ಸಿ ಇಫ್ತಿಕಾರ್‌ ಬಿ ನವಾಜ್‌ 12
ಕೆ.ಎಲ್‌. ರಾಹುಲ್‌ ಬಿ ನಸೀಮ್‌ 0
ವಿರಾಟ್‌ ಕೊಹ್ಲಿ ಸಿ ಇಫ್ತಿಕಾರ್‌ ಬಿ ನವಾಜ್‌ 35
ರವೀಂದ್ರ ಜಡೇಜ ಬಿ ನವಾಜ್‌ 35
ಸೂರ್ಯಕುಮಾರ್‌ ಬಿ ನಸೀಮ್‌ 18
ಹಾರ್ದಿಕ್‌ ಪಾಂಡ್ಯ ಔಟಾಗದೆ 33
ದಿನೇಶ್‌ ಕಾರ್ತಿಕ್‌ ಔಟಾಗದೆ 1 ಇತರ 14
ಒಟ್ಟು (19.4 ಓವರ್‌ಗಳಲ್ಲಿ 5 ವಿಕೆಟಿಗೆ) 148
ವಿಕೆಟ್‌ ಪತನ: 1-1, 2-50, 3-53, 4-89, 5-141
ಬೌಲಿಂಗ್‌:
ನಸೀಮ್‌ ಶಾ 4-0-27-2
ಶಹನವಾಜ್‌ ದಹಾನಿ 4-0-29-0
ಹ್ಯಾರಿಸ್‌ ರವೂಫ್ 4-0-35-0
ಶಾದಾಬ್‌ ಖಾನ್‌ 4-0-19-0
ಮೊಹಮ್ಮದ್‌ ನವಾಜ್‌ 3.4-0-33-3

LEAVE A REPLY

Please enter your comment!
Please enter your name here