




ಪುತ್ತೂರು: ಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್ ಏವಿಯೇಶನ್ ಅಂಡ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಪ್ರಗತಿ ವಿಸ್ತಾರ ನ್ಯಾಷನಲ್ & ಇಂಟರ್ ನ್ಯಾಷನಲ್ ಏವಿಯೇಶನ್ ಅವೇರ್ನೆಸ್ ಡ್ರೈವ್ ಕಾರ್ಯಕ್ರಮವು ಡಿ.13ರಂದು ಯಶಸ್ವಿಯಾಗಿ ನಡೆಯಿತು. “Ventara – Wings of Progress Initiative” ಎಂಬ ಹೆಸರಿನೊಂದಿಗೆ ನಡೆದ ಈ ಮಹತ್ವಾಕಾಂಕ್ಷೆಯ ಜಾಗೃತಿ ಶಿಬಿರವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡಿತು.




ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 82 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ವಿಮಾನಯಾನ ಕ್ಷೇತ್ರದತ್ತ ತಮ್ಮ ಒಲವನ್ನು ಪ್ರದರ್ಶಿಸಿದರು. ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಪಾಲಿಟೆಕ್ನಿಕ್ ಹಾಗೂ ಪದವಿ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಈ ವಿಸ್ತಾರವಾದ ಕ್ಷೇತ್ರವು ತೆರೆದಿರುವ ಉದ್ಯೋಗಾವಕಾಶಗಳು, ಕೈಗಾರಿಕಾ ಜ್ಞಾನ ಮತ್ತು ಉದ್ಯೋಗದ ಭವಿಷ್ಯದ ಕುರಿತು ಸ್ಪಷ್ಟ ಮತ್ತು ಆಳವಾದ ಪರಿಚಯವನ್ನು ನೀಡುವ ಮೂಲ ಉದ್ದೇಶ ಈಡೇರಿತು ಎಂದು ಸಂಸ್ಥೆಯ ಆಡಳಿತಾಧಿಕಾರಿ ರಶ್ಮಿತಾ ಎಂ.ಎಸ್.ತಿಳಿಸಿದ್ದಾರೆ.






ಕಾರ್ಯಕ್ರಮದ ಕೇಂದ್ರಬಿಂದು, ವಿಮಾನಯಾನ ವಲಯದ ವಿವಿಧ ಆಯಾಮಗಳ ಮೇಲಿನ ಸಮಗ್ರ ಮಾಹಿತಿಯಾಗಿದ್ದು, ಕೈಗಾರಿಕೆಯ ನಿರೀಕ್ಷೆಗಳು ಮತ್ತು ಮೃದು ಕೌಶಲ್ಯಗಳ (Soft Skills) ಪ್ರಾಮುಖ್ಯತೆ, ಕ್ಯಾಬಿನ್ ಕ್ರೂ ವೃತ್ತಿಜೀವನದ ಆಕರ್ಷಕ ಅವಕಾಶಗಳು, HAL (ಏರೋನಾಟಿಕ್ಸ್) ನಲ್ಲಿನ ಉದ್ಯೋಗ ಸಾಧ್ಯತೆಗಳು, ಏರೋಸ್ಪೇಸ್ ಕಾಂಪೊಸಿಟ್ ಟೆಕ್ನಿಷಿಯನ್ ಮತ್ತು ಏರೋಸ್ಪೇಸ್ CNC ಮೆಷಿನಿಸ್ಟ್ನಂತಹ ತಾಂತ್ರಿಕ ವೃತ್ತಿಗಳು, ವಿಮಾನ ನಿಲ್ದಾಣ ನಿರ್ವಹಣೆ, ಭದ್ರತಾ ಕ್ರಮಗಳು ಮತ್ತು ವೃತ್ತಿಪರ ಸಂವಹನ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

- ಸ್ಪೈಸ್ಜೆಟ್ನಲ್ಲಿ 17 ವರ್ಷಗಳ ಸುದೀರ್ಘ ಕ್ಯಾಬಿನ್ ಕ್ರೂ ಅನುಭವ ಹೊಂದಿರುವ ಬಿಂದುಸಾಗರ್ ಶೆಟ್ಟಿ, ಏರ್ ಇಂಡಿಯಾ SATS ಬೆಂಗಳೂರು ಗ್ರೌಂಡ್ ಆಪರೇಷನ್ನಲ್ಲಿ 2 ವರ್ಷಗಳ ಅನುಭವ ಹೊಂದಿರುವ ಕುಮಾರಿ ಚೈತನ್ಯ, ಏರ್ ಇಂಡಿಯಾ SATS, ಮಂಗಳೂರು ಗ್ರೌಂಡ್ ಆಪರೇಷನ್ನಲ್ಲಿ 1 ವರ್ಷದ ಅನುಭವ ಹೊಂದಿರುವ ಕುಮಾರಿ ಅಶ್ವಿತಾ ರೈ ತಮ್ಮ ಪ್ರಾಯೋಗಿಕ ಜ್ಞಾನ ಮತ್ತು ವಿಮಾನಯಾನ ಉದ್ಯಮದ ನಿರೀಕ್ಷೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
-
ಇದೇ ಸಂದರ್ಭದಲ್ಲಿ ಸಂಸ್ಥೆಯು ನೀಡುತ್ತಿರುವ ಪ್ರಮುಖ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಇಂಟರ್ನ್ಯಾಷನಲ್ ಡಿಪ್ಲೊಮಾ ಇನ್ ಏರ್ಲೈನ್ & ಏರ್ಪೋರ್ಟ್ ಆಪರೇಷನ್ಸ್, ಕಾಂಪ್ರಿಹೆನ್ಸಿವ್ ಕೋರ್ಸ್ ಇನ್ ಏರ್ಲೈನ್ ಸರ್ವೀಸ್ & ಸೇಫ್ಟಿ ಆಪರೇಷನ್ಸ್, BBA ಇನ್ ಏವಿಯೇಶನ್ ಮ್ಯಾನೇಜ್ಮೆಂಟ್, B.Voc ಇನ್ ಏವಿಯೇಶನ್, ಜೊತೆಗೆ, AASSC ಮಾನ್ಯತೆ ಪಡೆದ ಏರ್ಲೈನ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ ಹಾಗೂ ಏರ್ಪೋರ್ಟ್ ಟರ್ಮಿನಲ್ ಆಪರೇಷನ್ ಎಕ್ಸಿಕ್ಯೂಟಿವ್ನಂತಹ ವಿಶೇಷ ಪ್ರಮಾಣಪತ್ರ ಕೋರ್ಸ್ಗಳ ಮಾಹಿತಿಯನ್ನು ನೀಡಲಾಯಿತು.
ವಿದ್ಯಾರ್ಥಿಗಳು ತಾವು ವಿಮಾನಯಾನ ಕ್ಷೇತ್ರದ ಭವಿಷ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಮಹತ್ವದ ಸ್ಪಷ್ಟತೆ ಪಡೆದಿದ್ದೇವೆ ಎಂದು ಸಂತೃಪ್ತಿಯ ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ Ventara – Wings of Progress Initiative’ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.








