




ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರ ಬಿಡುಗಡೆಯು ದ.12ರಂದು ರಾತ್ರಿ ಬಿಡುಗಡೆಗೊಳಿಸಲಾಯಿತು.




ರಾತ್ರಿ ಭಜನೆ, ಮಹಾಪೂಜೆಯ ಬಳಿಕ ದೇವಿಯ ನಡೆಯಲ್ಲಿ ಪ್ರಾರ್ಥಿಸಿದ ಮಂದಿರದ ಅರ್ಚಕ ತಿರುಮಲೇಶ್ವರ ಭಟ್‌ರವರು ಮಂದಿರದ ಪದಾಧಿಕಾರಿಗಳಿಗೆ ಆಮಂತ್ರಣ ಪತ್ರವನ್ನು ಹಸ್ತಾಂತರಿಸಿದರು. ಮಂದಿರದ ಅಧ್ಯಕ್ಷ, ಉದ್ಯಮಿ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ನಿವೃತ್ತ ಎ.ಎಸ್.ಐ. ರಘುರಾಮ ಹೆಗ್ಡೆ ಉರ್ಲಾಂಡಿ,, ಜಯಕಿರಣ್ ಉರ್ಲಾಂಡಿ, ಕೃಷ್ಣ ಮಚ್ಚಿಮಲೆ, ಗೋಪಾಲ ಆಚಾರ್ಯ, ಪುಷ್ಪರಾಜ್ ಹೆಗ್ಡೆ ಉರ್ಲಾಂಡಿ, ಫಕೀರ ಗೌಡ, ಗೋಪಾಲ ಆಚಾರ್ಯ, ಜನಾರ್ದನ, ಗುಲಾಬಿ ಗೌಡ ಮತ್ತಿತರು ಉಪಸ್ಥಿತರಿದ್ದರು.














