ಉಪ್ಪಿನಂಗಡಿ: ಪುತ್ತೂರು, ಕಡಬ, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಪ್ರಪ್ರಥಮ ಸಿ.ಎನ್.ಜಿ. ಘಟಕ ಸೆ. ೫ರಂದು ಉಪ್ಪಿನಂಗಡಿ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಪಂಜಾಳದಲ್ಲಿರುವ ಶಾಲಿವಾಹನ ಫ್ಯೂಯೆಲ್ಸ್ (ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ., ಮಾಲಿಕತ್ವದ ಪೆಟ್ರೋಲ್ ಪಂಪ್)ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಲಿವಾಹನ ಫ್ಯೂಯೆಲ್ಸ್ ಸಂಸ್ಥೆಯ ಮಾಲಕರಾದ ಚಂದ್ರಶೇಖರ ತಾಳ್ತಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಘಟಕವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಹೆಚ್.ಪಿ.ಸಿ.ಎಲ್. ಸಂಸ್ಥೆಯ ಡಿಜಿ.ಎಂ. ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಗೈಲ್ ಗ್ಯಾಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ಯು.ಸಿ. ಸಿಂಗ್, ಡಿ.ಜಿ.ಯಂ. ಪಿ.ಜಿ. ಜೋಯ್, ಹೆಚ್.ಪಿ.ಸಿ.ಎಲ್. ಸಂಸ್ಥೆಯ ಮ್ಯಾನೇಜರ್ ಉದಯಶಂಕರ ಶೆಟ್ಟಿ ಕೆ., ಗೈಲ್ ಗ್ಯಾಸ್ ಚೀಫ್ ಮ್ಯಾನೇಜರ್ ಮಂಗೇಶ್ ರಾಮ್‌ಟೇಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಚಂದ್ರಶೇಖರ ತಾಳ್ತಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.