- ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಆಗಮ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣ
ಪುತ್ತೂರು: ವೇದ ತಂತ್ರಾಗಮದಲ್ಲಿ ಡಿಪ್ಲೋಮ ಮಾಡಿದ ನಗರಸಭಾ ಸದಸ್ಯರು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ನಡೆಸುವ ಆಗಮ ಪ್ರಸಿದ್ಧ ಪರೀಕ್ಷೆಗೆ ಸಂಬಂಧಿಸಿ ‘ವಾತುಲ ಆಗಮ ಪ್ರವೀಣ’ ಪರೀಕ್ಷೆ ವಿಭಾಗದಲ್ಲಿ ಉತ್ತೀರ್ಣರಾಗಿದ್ದಾರೆ.
ಮೈಸೂರು ಸರಕಾರಿ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ” ಶ್ರೀ ಗಣೇಶ ಸಂಸ್ಕೃತ ಜೋತಿಷ್ಯ ವೇದ ಪಾಠ ಶಾಲೆ’ ಮೂಲಕ ಪರೀಕ್ಷೆಗಳು ಕೋವಿಡ್ ಬಳಿಕ ಈ ಬಾರಿ ಜೂನ್ ತಿಂಗಳಲ್ಲಿ ನಡೆದಿತ್ತು. ಈ ಪರೀಕ್ಷೆ ಬರೆಯುವವರು ಅತೀ ವಿರಳರಾಗಿದ್ದು, ಸುಮಾರು ಪ್ರವರ ಪ್ರವೀಣ ಪರೀಕ್ಷೆಗಳಲ್ಲಿ 600 ಮಂದಿ ಹಲವು ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು. ಈ ಪೈಕಿ ಪಿ.ಜಿ.ಜಗನ್ನಿವಾಸ ರಾವ್ ಅವರು ‘ವಾತುಲ ಆಗಮ ಪ್ರವೀಣ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿ.ಜಿ.ಜಗನ್ನಿವಾಸ ರಾವ್ ಅವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಕಟೀಲು ದುರ್ಗಾಪರಮೇಶ್ವರಿ ಸಂಸ್ಕೃತ ಕಾಲೇಜಿನಲ್ಲಿ ” ವೇದ ತಂತ್ರಾಗಮ” ವಿಭಾಗದಲ್ಲಿ ಡಿಪ್ಲೊಮಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು. ಆಗಮ ಪ್ರವೀಣ ಪರೀಕ್ಷೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ ತಂತ್ರಿಗಳು ಸಹ ಉತ್ತೀರ್ಣರಾಗಿದ್ದಾರೆ.