ಪುತ್ತೂರು ತಾ| ಮಟ್ಟದ ದಸರಾ ಕ್ರೀಡಾಕೂಟ

0

ಪುತ್ತೂರು: ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಭಾನುವಾರ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಜರಗಿತು. ಧ್ವಜಾರೋಹಣದ ಬಳಿಕ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆ ಹಾಗೂ ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಿಂದ ಬ್ಯಾಂಡ್, ವಾದ್ಯಗಳ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುತ್ತೂರು ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ, ನಗರಸಭೆ, ತಾಲೂಕು ಯುವಜನ ಒಕ್ಕೂಟ, ಮಜ್ಜಾರಡ್ಕ ವಿಷ್ಣು ಯುವ ಶಕ್ತಿ ಬಳಗ ಸಹಯೋಗದಲ್ಲಿ ಕ್ರೀಡಾಕೂಟ ನಡೆಯಿತು.

ಕ್ರೀಡೆಗೆ ಪ್ರೋತ್ಸಾಹ: ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಕೊರೋನಾ ಕಾಲಘಟ್ಟದ ಬಳಿಕ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದ್ದು, ರಾಜ್ಯ ಮಟ್ಟದವರೆಗೆ ಹೋಗುವಂತಾಗಬೇಕು. ಈ ವರ್ಷ ಸ್ವಾತಂತ್ರ್ಯದ ೭೬ನೇ ವರ್ಷದಲ್ಲಿ ನಾವಿದ್ದು, ಮುಂದೆ ನಡೆಯುವ ದಸರಾ ಹಬ್ಬಕ್ಕೆ ದಸರಾ ಕ್ರೀಡಾಕೂಟ ಮುನ್ನುಡಿ ಬರೆದಿದೆ ಎಂದು ಅಭಿಪ್ರಾಯಪಟ್ಟರು.

ದೇಹ ದೇಗುಲದಂತೆ: ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು, ಪ್ರತಿನಿತ್ಯ ವ್ಯಾಯಾಮ ಹಾಗೂ ಕ್ರಿಯಾತ್ಮಕ ಚಟುವಟಿಕೆಯಿಂದ ದೇಹವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕು. ದೇಹದ ಹಾಗೂ ಮನಸ್ಸಿನ ಆರೋಗ್ಯ ಸರಿಯಿದ್ದಾಗ ನಿರೀಕ್ಷಿತವಾದಂತಹ ಸಾಧನೆಯನ್ನು ಸಾಽಸಲು ಸಾಧ್ಯ. ಆದ್ದರಿಂದ ದೇಹವನ್ನು ದೇವಾಲಯದಂತೆ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರತಿಭೆಗಳಿಗೆ ಅವಕಾಶ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್‌ರವರು ದಸರಾ ಕ್ರೀಡಾಕೂಟ ನಾಡಿನ ಗೌರವದ ಪ್ರತೀಕ. ಇದರೊಂದಿಗೆ ಅನೇಕ ಕ್ರೀಡಾ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಸಿಕ್ಕಿದ್ದು, ಉತ್ತಮ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ ಎಂದ ಅವರು, ಪುತ್ತೂರಿಗೆ ಪ್ರತ್ಯೇಕ ತಾಲೂಕು ಕ್ರೀಡಾಂಗಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲೇ ಆಶಯ ಈಡೇರಲಿದೆ ಎಂದರು.

ಜನಜೀವನ ಸುಸ್ಥಿತಿಗೆ: ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‌ರವರು ಮಾತನಾಡಿ, ಕೊರೋನಾ ಸಾಂಕ್ರಾಮಿಕದ ನಂತರ ಇದೀಗ ಮತ್ತೆ ಜನಜೀವನ ಸುಸ್ಥಿತಿಗೆ ಮರಳುತ್ತಿವೆ. ಹಬ್ಬ, ಉತ್ಸವಗಳ ಜೊತೆಗೆ ಕ್ರೀಡಾಕೂಟಗಳು ಆರಂಭವಾಗಿದ್ದು, ಯುವಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರ ಎಂದರು.

ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಮಜ್ಜಾರಡ್ಕ ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಕ್ರೀಡಾ ಪ್ರತಿe ಬೋಧಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ತಾಲೂಕು ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಯುವಜನ ಸೇವೆ ಮತ್ತು ಕ್ರೀಡಾಽಕಾರಿ ಜಯರಾಮ ಗೌಡ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here