ಕೌಕ್ರಾಡಿ: ’ಗ್ರಾಮ ಒನ್’ಸೇವಾ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ಕರ್ನಾಟಕ ಸರಕಾರ ಇ-ಆಡಳಿತ ಇಲಾಖೆಯಡಿಯಲ್ಲಿ ಕಾರ್ಯಾಚರಿಸುವ ಕೌಕ್ರಾಡಿ ಗ್ರಾಮ ವ್ಯಾಪ್ತಿಯ “ಗ್ರಾಮ ಒನ್” ನಾಗರಿಕ ಸೇವಾ ಕೇಂದ್ರ ಸೆ.1ರಂದು ನೆಲ್ಯಾಡಿ ದುರ್ಗಾಶ್ರೀ ಟವರ‍್ಸ್‌ನಲ್ಲಿ ಶುಭಾರಂಭಗೊಂಡಿತು.

ಕಡಬ ತಹಸೀಲ್ದಾರ್ ಬಿ.ಅನಂತಕುಮಾರ್‌ರವರು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯಡಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಸುಮಾರು 750ಕ್ಕೂ ಮಿಕ್ಕಿ ಸೇವೆಗಳನ್ನು ಒಂದೇ ಸೂರಿನಡಿ ನೀಡಲಿದೆ. ನಾಗರಿಕರು ತಮ್ಮ ಗ್ರಾಮದಲ್ಲಿಯೇ ಸರಕಾರದ ಸೇವೆಗಳನ್ನು ಮದ್ಯವರ್ತಿಗಳ ಹಾವಳಿ ಇಲ್ಲದೆ ತಾಲೂಕು, ಹೋಬಳಿ ಮಟ್ಟದ ಕಚೇರಿಗಳ ಅಲೆ ದಾಟದವಿಲ್ಲದೆ ಪಡೆಯಬಹುದು ಎಂದರು.

ದುರ್ಗಾಶ್ರೀ ಟವರ‍್ಸ್ ಮಾಲಕ ಸತೀಶ್ ಕೆ.ಎಸ್., ದೋಂತಿಲ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ನೂಜಿನ್ನಾಯ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಸದಸ್ಯರಾದ ಉದಯ ಕುಮಾರ್ ಗೌಡ ದೋಂತಿಲ, ಮಹಮ್ಮದ್ ಹನೀಫ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್, ಗ್ರಾಮಕರಣಿಕೆ ಅಶ್ವಿನಿ, ಗ್ರಾಮ ಸಹಾಯಕ ಕಿರಣ್, ನಾರಾಯಣ ಯನ್ ಬಲ್ಯ, ವಾಸುದೇವ ಗೌಡ, ಪ್ರಶಾಂತ್ ಶೆಟ್ಟಿ, ಗ್ರಾಮ ಒನ್ ಕೇಂದ್ರದ ಮಾಲಕಿ ಗುಣಶೀಲ ವಿಶ್ವನಾಥ್, ಮೊಬೈಲ್ ಮ್ಯಾಟ್ರಿಕ್ಸ್ ಮಾಲಿಕ ವಿಶ್ವನಾಥ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here