ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿ ವಿಂಗ್ ಇದರ ಆಶ್ರಯದಲ್ಲಿ ನಡೆಯುತ್ತಿರುವ 39ನೇ ವರ್ಷದ ಜೇಸಿ ಸಪ್ತಾಹ ’ನಮಸ್ತೆ-2022’ ಅಂಗವಾಗಿ ಜೆಸಿಐ ವಲಯ 15ರ ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾರವರ ನೆಲ್ಯಾಡಿ ಜೆಸಿಐಗೆ ಅಧಿಕೃತ ಭೇಟಿ ಕಾರ್ಯಕ್ರಮ, ನೆಲ್ಯಾಡಿ ಕೊಲ್ಯೊಟ್ಟು ಸೈಂಟ್ ಜೋಸೆಫ್ ಪ್ರಶಾಂತ ನಿವಾಸದ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ವಿತರಣೆ, ಶಾಲೆಗೆ ದತ್ತಿ ನಿಧಿ ವಿತರಣೆ ಸೆ.13ರಂದು ನಡೆಯಿತು.
ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾರನ್ನು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸ್ವಾಗತಿಸಿ ಬಳಿಕ ಕೊಲ್ಯೊಟ್ಟು ಸಂತ ಜೋಸೆಫ್ ಪ್ರಶಾಂತ ನಿವಾಸಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಂತರ ಅಲ್ಲಿ ಜೆಸಿ ಅಧ್ಯಕ್ಷೆ ಜಯಂತಿ ಬಿ.ಎಂ.ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಆಶ್ರಮವಾಸಿಗಳಿಗೆ ವಿಶೇಷ ಆತಿಥ್ಯ ನೀಡಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಚಾರಿಟಿ ಜೇಸಿಯ ಧ್ಯೇಯವಲ್ಲವಾದರೂ, ಸಾಮಾಜಿಕವಾಗಿ ಬೆರೆಯುವ, ಮಾನವೀಯ ಮೌಲ್ಯಗಳ ಪ್ರತಿಪಾದನೆಯ ಇಂತಹ ಕೆಲಸಗಳು ನಮಗೆ ಹೆಮ್ಮೆ ತರುವಂತಹದು, ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬದಂತಹ ಆಚರಣೆಗಳನ್ನು ಆಶ್ರಮದಂತಹ ಪರಿಸರಗಳಲ್ಲಿ ಮಾಡುವುದರಿಂದ ನಾವು ಭಗವಂತನ ಕೃಪೆಯನ್ನು ಹೊಂದಬಹುದು ಎಂದರು. ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾ, ವಲಯ 15ರ ಪ್ರಥಮ ಮಹಿಳೆ ಮರಿಯ ಜ್ಯೋತಿ ರೋಡ್ರಿಗಸ್, ವಲಯ ಉಪಾಧ್ಯಕ್ಷೆ ಸ್ವಾತಿ ಜೆ ರೈ, ವಲಯ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ನೆಲ್ಯಾಡಿಯ ವೈದ್ಯ ಡಾ.ಸದಾನಂದ ಕುಂದರ್, ಪ್ರಶಾಂತ ನಿವಾಸ್‌ನ ಸರಿತಾಜೋಸೆಫ್, ನೆಲ್ಯಾಡಿ ಜೆಸಿಐನ ನಿಕಟಪೂರ್ವಾಧ್ಯಕ್ಷ ಗಿರೀಶ್ ಡಿ., ಶುಭಹಾರೈಸಿದರು.
ಪೂರ್ವಾಧ್ಯಕ್ಷ ಗಣೇಶ್ ಕೆ ರಶ್ಮಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜಾಹ್ನವಿ ಪುರಂದರ ಜೇಸಿವಾಣಿ ವಾಚಿಸಿದರು. ಜೇಸಿ ಸಪ್ತಾಹದ ಯೋಜನಾ ನಿರ್ದೇಶಕರಾದ ಸುಚಿತ್ರ ಜೆ. ಬಂಟ್ರಿಯಾಲ್ ಜೇಸಿ ಸಪ್ತಾಹದ ವರದಿ ವಾಚಿಸಿದರು. ಇನ್ನೋರ್ವ ಯೋಜನಾ ನಿರ್ದೇಶಕ ಶಿವಪ್ರಸಾದ್ ಮತ್ತು ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸಹಕರಿಸಿದರು.
ಸನ್ಮಾನ/ದತ್ತಿನಿಧಿ ವಿತರಣೆ:
ವಲಯ 15ರ ವಲಯಾಧ್ಯಕ್ಷ ರೋಯನ್ ಉದಯ ಕ್ರಾಸ್ತಾ, ಪ್ರಥಮ ಮಹಿಳೆ ಮರಿಯ ರೋಡ್ರಿಗಸ್, ವಲಯ ಉಪಾಧ್ಯಕ್ಷೆ ಸ್ವಾತಿ ಜೆ ರೈ, ಪುರುಷೋತ್ತಮ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿ ಶಾಲೆಗೆ ದತ್ತು ನಿಧಿ ವಿತರಿಸಲಾಯಿತು. ಮುಖ್ಯಶಿಕ್ಷಕ ಆನಂದ ಅಜಿಲರವರು ದತ್ತು ನಿಧಿ ಸ್ವೀಕರಿಸಿದರು.