ಪುತ್ತೂರು : ಜಿಡೆಕಲ್ಲು ನಿವಾಸಿ, ದೇವಶ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಭಾಸ್ಕರ ಜೋಗಿ (56ವ.) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಭಾಸ್ಕರರವರು ಸತತ 25 ವರ್ಷಗಳ ಕಾಲ ಹುಲಿ ವೇಷ ಹಾಕುತ್ತಿದ್ದ ಪಿಲಿರಾಧಾ ಎಂದು ಗುರಿತಿಸಿರುವ ರಾಧಾಕೃಷ್ಣರವರ ತಂಡದಲ್ಲಿ ಹುಲಿವೇಷ ಹಾಕುತ್ತಿದ್ದು ಪಿಲಿಭಾಸ್ಕರ ಎಂದು ಖ್ಯಾತರಾಗಿದ್ದರು. ಕಳೆದ ಮೂರು ವರ್ಷದಿಂದ ಹುಲಿವೇಷ ಹಾಕುವುದನ್ನು ನಿಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.