1.70 ಲಕ್ಷ ರೂ.ನಿವ್ವಳ ಲಾಭ; ಪ್ರತಿ ಲೀ.ಹಾಲಿಗೆ 23 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.22ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಶಾಂತಾರಾಮ ಅವರು ಅಧ್ಯಕ್ಷತೆ ವಹಿಸಿದ್ದರು. 2021-22ನೇ ಸಾಲಿನಲ್ಲಿ ಸಂಘವು 1,70,897.97 ರೂ. ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಪ್ರತಿ ಲೀ.ಹಾಲಿಗೆ 23 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಉಪಾಧ್ಯಕ್ಷ ಶಾಂತಾರಾಮರವರು ತಿಳಿಸಿದರು. 2022-23ನೇ ಸಾಲಿನಲ್ಲಿ ಸಭಾಂಗಣದ ನೆಲಕ್ಕೆ ಟೈಲ್ಸ್ ಹಾಕುವುದು, ಅಂಗಳಕ್ಕೆ ಇಂಟರ್ಲಾಕ್ ಹಾಕುವುದು, ತಡೆಗೋಡೆ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯರು ಸಹಕರಿಸುವಂತೆ ಕೇಳಿಕೊಂಡರು. ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾರವರು ಹಾಲಿನ ಗುಣಮಟ್ಟ, ಹಸುಗಳಿಗೆ ಮೇವು, ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.
ಸಂಘದ ನೂತನ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ, ನಿರ್ದೇಶಕರಾದ ಕೆ.ಮಹಾವೀರ ಜೈನ್, ರಾಧಾಕೃಷ್ಣ ಕೆ.,ವರ್ಗೀಸ್ ಅಬ್ರಹಾಂ, ಆನಂದ ಶೆಟ್ಟಿ, ಅಣ್ಣಿ ನಾಯಕ್, ರೋಸಮ್ಮ ವೇದಿಕೆಯಲ್ಲಿ ಉಪಸ್ಥಿತಿರಿದ್ದರು.
ಬಹುಮಾನ:
2021-22ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಅಣ್ಣಿ ನಾಯಕ್ ಕೊರಮೇರು(ಪ್ರಥಮ) ಹಾಗೂ ಕೆ.ಕುಶಾಲಪ್ಪ ಗೌಡ ಕುಡಾಲ(ದ್ವಿತೀಯ)ಬಹುಮಾನ ಪಡೆದುಕೊಂಡರು. ಕಾರ್ಯದರ್ಶಿ ಪ್ರವೀಣ್ಕುಮಾರ್ರವರು ವರದಿ ಮಂಡಿಸಿದರು. ನಿರ್ದೇಶಕ ರಾಧಾಕೃಷ್ಣ ಕೆ., ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನೂತನ ಅಧ್ಯಕ್ಷ ಕೇಶವ ಗೌಡ ವಂದಿಸಿದರು. ಶಾಂತಾರಾಮ ಕುಡಾಲ ಪ್ರಾರ್ಥಿಸಿದರು. ಹಾಲು ಪರೀಕ್ಷಕ ತೇಜಸ್, ಸಹಾಯಕ ತನಿಯ ಸಹಕರಿಸಿದರು.