ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ಪವಿತ್ರ ಡಿ.ಯವರ ಅಧ್ಯಕ್ಷತೆಯಲ್ಲಿ ಸೆ.21 ರಂದು ನಡೆಯಿತು. ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕುಡಿಯುವ ನೀರಿನ ಸಮಿತಿ ಸಭೆ ನಡೆಸುವುದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸುವುದು., ಪಾಳು ಬಿದ್ದ ಕೆರೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸುವುದು, ಅ.2 ರಂದು ಪಂಚಾಯತ್ ಸಭಾಭವನದಲ್ಲಿ ವಿಶೇಷ ಗ್ರಾಮಸಭೆ ನಡೆಸುವುದು, ಪಂಚಾಯತ್ ವ್ಯಾಪ್ತಿಯ ಸುಮಾರು 14 ಕಡೆ ಸೆ.26 ರಂದು ಹುಚ್ಚು ನಾಯಿ ನಿರೋಧಕ ಲಸಿಕಾ ಶಿಬಿರ ನಡೆಸುವುದು, ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾ ಕೂಟ ಹಮ್ಮಿಕೊಂಡು ಕಬ್ಬಡ್ಡಿ, ಖೋ ಖೋ, ಹಗ್ಗಜಗ್ಗಾಟ ಸ್ಪರ್ಧೆ ನಡೆಸುವುದು ಸೇರಿದಂತೆ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯಕ್ಕೆ ಬರಲಾಯಿತು. ಇರ್ದೆ ಗ್ರಾಮದ ಪದರಂಜ ಸುತ್ತಮುತ್ತ ಅನೇಕ ಕಡೆ ಅಡಿಕೆ ಮರದ ಸೋಗೆ ಬಾಗಿ ನಿಂತು ಹಳದಿ ಬಣ್ಣಕ್ಕೆ ತಿರುಗಿದ್ದು ಮರಕ್ಕೆ ಬಂದ ರೋಗದ ಲಕ್ಷಣಗಳನ್ನು ಪರಿಶೀಲನೆ, ಸಂಶೋಧನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ತೋಟಗಾರಿಕೆ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು. ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ ಬ್ಯಾಂಕ್ ಮಿತ್ರ ಪ್ರಭಾಕರ ರೈ ಮಾಹಿತಿ ನೀಡಿದರು. ಪಂಚಾಯತ್ ಸಭಾಭವನದಲ್ಲಿ ಹೆಸರು ನೋಂದಣಿ ಕಾರ್ಯಕ್ರಮ ಸೆ.23 ರಂದು ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಹಾಗೂ ಸದಸ್ಯರಾದ ಪ್ರಕಾಶ್ ರೈ, ಉಮಾವತಿ ಜಿ.,ವಿದ್ಯಾಶ್ರೀ, ಪಾರ್ವತಿ ಎಂ, ಗಂಗಾಧರ ಗೌಡ, ಚಂದ್ರಶೇಖರ ರೈ, ರಮ್ಯಶ್ರೀ, ಬೇಬಿ ಜಯರಾಂ, ಸುಮಲತಾ, ಮಹಾಲಿಂಗ ನಾಯ್ಕ, ಮೊಯಿದುಕುಂಞ, ನವೀನ್ ರೈ, ಗೋಪಾಲ, ಲಲಿತಾ ಚಿದಾನಂದ, ಮಹೇಶ ಕೆ., ಲಲಿತಾ, ಪಿಡಿಒ ಸೌಮ್ಯಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್, ಕವಿತಾ, ಸವಿತಾ ಸಹಕರಿಸಿದರು.