ಪುತ್ತೂರು: ಈಶ್ವರಮಂಗಲ ಮೀಲಾದುನ್ನಬಿ ಐಕ್ಯ ವೇದಿಕೆ ವತಿಯಿಂದ ಈದ್ ಮಿಲಾದ್ ಆಚರಣೆಯ ಬಗ್ಗೆ ಸಮಾಲೋಚನಾ ಸಭೆ ಸೆ.23ರಂದು ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್‌ರವರ ನೇತೃತ್ವದಲ್ಲಿ ನಡೆಯಿತು.
ರಬೀವುಲ್ ಅವ್ವಲ್ 12ರಂದು ಬೆಳಗ್ಗೆ ಈಶ್ವರಮಂಗಳ ಮಖಾಂ ಝಿಯಾರತ್‌ನೊಂದಿಗೆ ಆರಂಭಗೊಂಡು ಊರಿನ ಹಿರಿಯರು, ಮದ್ರಸಾ ವಿದ್ಯಾರ್ಥಿಗಳನ್ನೊಳಗೊಂಡು ದಫ್ ಮತ್ತು ಸ್ಕೌಟ್‌ನೊಂದಿಗೆ ಈಶ್ವರಮಂಗಲ ಪೇಟೆಯಾಗಿ ಪಂಚಾಯತ್‌ನವರೆಗೆ ಶಾಂತಿ, ಸೌಹಾರ್ದತೆಯೊಂದಿಗೆ ಶಿಸ್ತುಬದ್ಧ ಕಾಲ್ನಡಿಗೆ ಜಾಥಾ ಮಾಡುವುದಾಗಿ ತೀರ್ಮಾನಿಸಲಾಯಿತು.
ಐಕ್ಯ ವೇದಿಕೆ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಈದ್‌ಮಿಲಾದ್ ಹಬ್ಬದ ಆಚರಣೆಗೆ ಸರ್ವಧರ್ಮಿಯರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಜಮಾಅತ್ ಅಧ್ಯಕ್ಷ ಟಿ.ಎ ಖಾದರ್ ಹಾಜಿ, ಕಾರ್ಯದರ್ಶಿ ಕೆ.ಎಂ ಮಹಮ್ಮದ್, ಜಮಾಅತ್ ಹಿರಿಯರಾದ ಎಂ.ಎ ಖಾಲಿದ್, ಎಸ್.ಎಂ ಮಹಮ್ಮದ್, ಸೂಫಿ ಮೀನಾವು, ಮುಸ್ತಫಾ ದರ್ಖಾಸ್, ಹಾಗೂ ಜಮಾಅತ್ ಪ್ರಮುಖರು ಉಪಸ್ಥಿತರಿದ್ದರು. ಐಕ್ಯ ವೇದಿಕೆ ಪ್ರ.ಕಾರ್ಯದರ್ಶಿ ಇ ಎ ಮಹಮ್ಮದ್ ಕುಂಞ ಶುಭ ಹಾರೈಸಿದರು.