ನರಿಮೊಗರು ಗ್ರಾ.ಪಂ.ನಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

0

ಪುತ್ತೂರು: ನರಿಮೊಗರು ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ನರಿಮೊಗರು ಇವರ ಪ್ರಾಯೋಜಕತ್ವದಲ್ಲಿ ಗ್ರಾಮ ಒನ್ ಪುರುಷರಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ಸೆ.೨೧ರಂದು ನರಿಮೊಗರು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್‌ರವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ನೋಂದಣಿದಾರರಾದ ಕೃಷ್ಣಪ್ಪ ಹಾಗೂ ಸಂಧ್ಯಾರವರು ಶಿಬಿರ ನಡೆಸಿಕೊಟ್ಟರು. ಆರೋಗ್ಯ ಇಲಾಖೆಯಿಂದ ಉಚಿತ ಶುಗರ್ ಟೆಸ್ಟ್ ನಡೆಯಿತು. ಗ್ರಾ.ಪಂ ಕಾರ್ಯದರ್ಶಿ ಶೇಖ್ ಖಲಂದರ್ ಅಲಿ, ಆರೋಗ್ಯ ಇಲಾಖೆಯವರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿ ಮಾಧವ್ ಹಾಗೂ ಇತರರು ಸಹಕರಿಸಿದರು.

LEAVE A REPLY

Please enter your comment!
Please enter your name here