ಪುತ್ತೂರು: ಜಿಲ್ಲಾ ಪಂಚಾಯತ್, ಕೆದಂಬಾಡಿ ಗ್ರಾಮ ಪಂಚಾಯತ್, ಪುತ್ತೂರು ಪಶು ಸಂಗೋಪನಾ ಇಲಾಖೆ ಇದರ ಆಶ್ರಯದಲ್ಲಿ ತಿಂಗಳಾಡಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಇದರ ಸಹಯೋಗದೊಂದಿಗೆ ಸೆ.30ರಂದು ತಿಂಗಳಾಡಿಯಲ್ಲಿರುವ ಕೆದಂಬಾಡಿ ಗ್ರಾಪಂ ವಠಾರದಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಲಿದೆ.
ಕೆದಂಬಾಡಿ ಗ್ರಾಮ ಪಂಚಾಯತ್, ಕಟ್ಟತ್ತಾರು ನಿಡ್ಯಾಣ ಬಸ್ಸು ತಂಗುದಾಣದ ಬಳಿ, ತ್ಯಾಗರಾಜ ಬಸ್ಸು ತಂಗುದಾಣದ ಬಳಿ, ಕೆದಂಬಾಡಿ ಮಠ ಆನಂದ ರೈ ಮನೆ ಬಳಿ, ಕುಕ್ಕುಂಜೋಡು ಸಾರ್ವಜನಿಕ ಕುಡಿಯುವ ನೀರಿನ ಪಂಪು ಶೆಡ್ ಬಳಿ,ಬೋಳೋಡಿ ಅಂಗನವಾಡಿ ಕೇಂದ್ರದ ಬಳಿ, ಸನ್ಯಾಸಿಗುಡ್ಡೆ ಸಮಾಜ ಮಂದಿರ ಬಳಿ, ಕುಯ್ಯಾರು ಬಸ್ಸು ತಂಗುದಾಣದ ಬಳಿ, ಕುರಿಕ್ಕಾರ ತಾರಾನಾಥ ರೈ ಮನೆ ಬಳಿ ಲಸಿಕಾ ಶಿಬಿರ ನಡೆಯಲಿದೆ. ಗ್ರಾಮಸ್ಥರು ತಮ್ಮ ಸಾಕು ನಾಯಿಗಳನ್ನು ಮೇಲೆ ನಿಗದಿಪಡಿಸಿದ ತಮ್ಮ ಹತ್ತಿರದ ಸ್ಥಳಗಳಗೆ ತಂದು ಲಸಿಕೆ ಹಾಕಿಸಿ, ಗ್ರಾಮದಲ್ಲಿ ಹುಚ್ಚು ನಾಯಿ ಲೋಗವನ್ನು ನಿರ್ಮೂಲನೆ ಮಾಡಲು ಸಹಕರಿಸುವಂತೆ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.