ಅ. 5ರಂದು ಉಪ್ಪಿನಂಗಡಿ ಶ್ರೀ ರಾಮ ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

32 ನೇ ವರ್ಷಕ್ಕೆ ಪಾದಾರ್ಪಣೆಯೊಂದಿಗೆ

ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್ಟೇಂಡ್ ಬಳಿ ಕಳೆದ 31 ವರ್ಷಗಳಿಂದ ಕಾರ್‍ಯಾಚರಿಸುತ್ತಿರುವ ಶ್ರೀ ರಾಮ ಮೆಡಿಕಲ್ಸ್ ಸಂಸ್ಥೆ ಅ. 5ರಂದು ಸ್ಥಳಾಂತರಗೊಂಡು ಶೆಣೈ ನರ್ಸಿಂಗ್ ಹೋಂ ಬಳಿ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಶಿವಪ್ರಸಾದ್ ಮುದ್ರಜೆ ತಿಳಿಸಿದ್ದಾರೆ.


ಉಪ್ಪಿನಂಗಡಿ ಹಾಗೂ ಆಸುಪಾಸಿನ ಗ್ರಾಮಸ್ಥರಿಗೆ ಸತತ 31 ವರ್ಷಗಳಿಂದ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇದೀಗ ಗ್ರಾಹಕರ ಹೆಚ್ಚಿನ ಅನೂಕೂಲತೆಗಾಗಿ ಪ್ರಸ್ತುತ ಮಳಿಗೆಯ ಮುಂಭಾಗಕ್ಕೆ ಸ್ಥಳಾಂತರಗೊಳ್ಳಲಿದ್ದು, ಸಮಾರಂಭದಲ್ಲಿ ಧಾರ್ಮಿಕ, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಶಿವಪ್ರಸಾದ್ ಮುದ್ರಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here