





ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಬೈಂದೂರು ಪ್ರಭಾಕರ ರಾವ್ ಮೊಮೋರಿಯಲ್ ಟ್ರಸ್ಟ್ ಮತ್ತು ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯದ ಸಹಯೋಗದಲ್ಲಿ ಅ. 9ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9.30ರಿಂದ ಅಪರಾಹ್ನ 1.30 ರವರೆಗೆ ಶ್ರೀ ಸತ್ಯಸಾಯಿ ಮಂದಿರದ ವಠಾರದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಜರಗಲಿದೆ. ಪೂರ್ವಾಹ್ನ 8.30ರಿಂದ 11.30 ರವರೆಗೆ ದಾಖಲಾತಿ ಪಡೆತಬಹುದಾಗಿದೆ. ಶಿಬಿರದಲ್ಲಿ ದಂತಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಇತ್ಯಾದಿ ಚಿಕಿತ್ಸೆಗಳು ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




            





