





ಬಡಗನ್ನೂರು: ಕೖೊಲ ಬಡಗನ್ನೂರು ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕನ್ನಡ ರಾಜ್ಯೋತ್ಸವ ಹಾಗೂ ಬಡಗನ್ನೂರು ಗ್ರಾ. ಪಂ ನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯಗಳನ್ನು ಉದ್ಘಾಟನಾ ಸಮಾರಂಭ ಜರಗಿತು.



ಬಡಗನ್ನೂರು ಗ್ರಾ ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿ ಶುಭ ಹಾರೖೆಸಿದರು.ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲಾ ವಿಪಿ ಸದಸ್ಯರುಗಳಾದ ಸಂತೋಷ ಆಳ್ವ ಗಿರಿಮನೆ, ಶ್ರೀಮತಿ ಕನ್ನಡ್ಕ, ಸುಜಾತ ಮೖೆಂದನಡ್ಕ ಮಾತನಾಡಿ, ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ.ಬಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.





ವೇದಿಕೆಯಲ್ಲಿ ಶಾಲಾ ಸ್ಡಿಎಂಸಿ ಅಧ್ಯಕ್ಷ ವಸಂತಗೌಡ ಕೖೊಲ, ಉಪಾಧ್ಯಕ್ಷ ಸತೀಶ್ ಚಂದು ಕೊಡ್ಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಮಕ್ಕಳ ಪೋಷಕರು ಶಾಲಾಭಿವೖದ್ಧಿ ಸಮಿತಿ ಸದಸ್ಯರು, ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಶಿಕ್ಷಕರಿಂದ ಕನ್ನಡ ನಾಡು-ನುಡಿಯ ಬಗ್ಗೆ ಭಾಷಣ ನಡೆಯಿತು.

ನೂತನ ಶೌಚಾಲಯ ಉದ್ಘಾಟನೆ
ಬಡಗನ್ನೂರು ಗ್ರಾ. ಪಂ ಅಧ್ಯಕ್ಷೆ  ಪುಷ್ಪಲತಾ ದೇವಕಜೆ ರವರು ನೂತನ, ಶೌಚಾಲಯವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಗ್ರಾ. ಪಂ ಸದಸ್ಯ ಸಂತೋಷ್ ಆಳ್ವ ಗಿರಿಮನೆ ಮಾತನಾಡಿ, ಶಾಲೆಗೆ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


            







