ಪುತ್ತೂರು: ಸರ್ವೆ ಗ್ರಾಮದ ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಆಶ್ರಯದಲ್ಲಿ ಗಾಂಧೀಜಯಂತಿ ಪ್ರಯುಕ್ತ ಅ.೨ರಂದು ಕೂಡುರಸ್ತೆಯಿಂದ ರೆಂಜಲಾಡಿವರೆಗೆ ರಸ್ತೆಯ ಬದಿಯ ಕಸ, ಹುಲ್ಲು ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸುಂದರ ಬಲ್ಯಾಯ, ಅಧ್ಯಕ್ಷ ಹರೀಶ್ ನಾಯ್ಕ ಎಲಿಯ, ಗೌರವ ಸಲಹೆಗಾರರಾದ ಪದ್ಮಯ್ಯ ನಾಯ್ಕ, ತಿಮ್ಮಪ್ಪ ನಾಯ್ಕ, ಅಶೋಕ್ ನಾಯ್ಕ, ನಾರಾಯಣ ಬಲ್ಯಾಯ ಉಪಸ್ಥಿತರಿದ್ದರು.
ಸದಸ್ಯರುಗಳಾದ ಸುಬ್ರಹ್ಮಣ್ಯ ಶರತ್, ವಿಜ್ಞೇಶ್ ಪಂಡಿತ್, ದೀಕ್ಷಿತ್ ಪಂಡಿತ್, ನವೀನ, ಮೋಕ್ಷಿತ, ಅಕ್ಷಯ್, ಬಾಲಚಂದ್ರ, ಪ್ರದೀಪ್, ಪ್ರಣಮ್, ನವೀನ್ ಬಾಲಾಯ, ಭರತ್, ನವೀನ ಎಲಿಯ, ಪುರುಷೋತ್ತಮ, ಅನಿಲ್ ಕುಮಾರ್ ಬಾಲಾಯ, ಜಗದೀಶ್ ಬಾಲಾಯ,ನಿಶಾಂತ್, ಮೋಹನ, ರವಿ ಗೌಡ, ಹೇಮಚಂದ್ರ, ಮಧುಚಂದ್ರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಧ್ಯಾಹ್ನ ಪಾನೀಯ ಹಾಗೂ ಸಿಹಿತಿಂಡಿಯನ್ನು ಸೂರ್ಯನಾರಾಯಣ ಕಣ್ಣಾರಾಯ ನೀಡಿ ಸಹಕರಿಸಿದರು. ನೆಕ್ಕಿಲುವಿನಲ್ಲಿ ಸ್ವಸ್ತಿಕ್ ಗೆಳೆಯರ ಬಳಗದಿಂದ `ನೆಕ್ಕಿಲು’ ಎನ್ನುವ ನಾಮಫಲಕವನ್ನು ಇದೇ ವೇಳೆ ಅಳವಡಿಸಿ ಅನಾವರಣಗೊಳಿಸಲಾಯಿತು.