





ವಿಟ್ಲ: ದೊಡ್ಡಡ್ಕ ಶ್ರೀ ಷಣ್ಮುಖ ಜ್ಯೋತಿಷ್ಯಾಲಯದಲ್ಲಿ ಸಂಪ್ಯ ಉದಯನಾರಾಯಣರವರ ಪೌರೋಹಿತ್ಯದಲ್ಲಿ ಆಯುಧ ಪೂಜೆ ನಡೆಯಿತು. ಆರಂಭದಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಆಯುಧ ಪೂಜೆಯನ್ನು ನೆರವೇರಿಸಲಾಯಿತು.


ನವಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಆನಂದ ಬಲ್ಯಾಯ, ಮುಂಡೋಡಿಯ ಸಿವಿಲ್ ಇಂಜಿನಿಯರ್ ವಿಶ್ವನಾಥ ಮುಂಡೋಡಿ, ಶ್ರೀಹರಿ ಪಂಡಿತ್ ಪುರುಷರಕಟ್ಟೆ, ರಶ್ಮಿರಾಧಾಕೃಷ್ಣ ಆನೆಗುಂಡಿ, ನಾರಾಯಣ ಬಲ್ಯಾಯ ಮತ್ತು ಸಹೋದರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೊಡ್ಡಡ್ಕ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯ, ಪತ್ನಿ ವಾಣಿ ಶ್ರೀ, ಪುತ್ರ ವಿನ್ಯಾಸ್ ಡಿ.ಎಸ್.ಅತಿಥಿಗಳನ್ನು ಸ್ವಾಗತಿಸಿದರು.













