








ಸವಣೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸವಣೂರು ಮಂಡಲದ ವತಿಯಿಂದ ಸಂಘದ ಸ್ಥಾಪನಾ ದಿನವಾದ ವಿಜಯದಶಮಿಯ ಅಂಗವಾಗಿ ಪಥ ಸಂಚಲನ ನಡೆಯಿತು. ಮಾಂತೂರು ಅಂಬೇಡ್ಕರ್ ಭವನದ ಬಳಿಯಿಂದ ಸವಣೂರು ಜಂಕ್ಷನ್ ವರೆಗೆ ಪಥಸಂಚಲನ ಸಾಗಿ ಬಂತು. ವಿನಾಯಕ ಸಭಾಭವನದಲ್ಲಿ ಬೌದ್ಧಿಕ್ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹ ಪ್ರಚಾರ ಪ್ರಮುಖ್ ಸೂರಜ್ ಕುಮಾರ್ ಮಂಗಳೂರು ಬೌದ್ಧಿಕ್ ನೀಡಿದರು. ಅಧ್ಯಕ್ಷತೆಯನ್ನು ನ್ಯಾಯವಾದಿ ಪ್ರಶಾಂತ್ ರೈ ಪುಣ್ಚಪ್ಪಾಡಿ ವಹಿಸಿದ್ದರು.





ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಗ್ರಾಮಾಂತರ ಸಂಘ ಚಾಲಕ ಸುಧಾಕರ ರೈ ಕುಂಜಾಡಿ ಉಪಸ್ಥಿತರಿದ್ದರು.






