ಮಾದಕ ವಸ್ತುಗಳಿಂದ ಜನರು ದೂರವಿರುವಂತೆ ಎಸ್.ಐ ಸುಹಾಸ್ ಸೂಚನೆ
ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಸ್ ಇ,ಎಸ್ ಟಿ ಕುಂದು ಕೊರತೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಸುಹಾಸ್ ‘ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ವಸ್ತುಗಳಿದ ದೂರ ಇರುವಂತೆ, ಅದರಲ್ಲಿಯೂ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದರು.
ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ಪೋಷಕರು ನಿಗಾ ವಹಿಸಬೇಕೆಂದು ಹೇಳಿದರು.
ಸಣ್ಣ ಸಣ್ಣ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನು ನೀಡಿ ಅನಾಹುತಗಳನ್ನು ತಂದುಕೊಳ್ಳಬೇಡಿ. ಇತ್ತೀಚಿಗೆ ಹಲವಾರು ಘಟನೆಗಳು ಸಣ್ಣ ಸಣ್ಣ ಮಕ್ಕಳಿಂದ ವಾಹನ ಅಪಘಾತಗಳ ಮೂಲಕ ಉಂಟಾಗುತ್ತಿದ್ದು ಪೋಷಕರು ಎಚ್ಚರಿಕೆ ವಹಿಸಿಕೊಳ್ಳುವಂತೆ ತಿಳಿಸಿದರು.
ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ತಕ್ಷಣ ಠಾಣೆಗೆ ತಿಳಿಸಿ, ಏನಾದರೂ ತುರ್ತು ಸಂದರ್ಭಗಳಲ್ಲಿ ಇದ್ದರೆ ತಕ್ಷಣ 112 ಗೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ತಿಳಿಸಿದರು.
ತಮ್ಮ ತಮ್ಮ ಮನೆಯ ಪರಿಸರಗಳಲ್ಲಿ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳು ತಿಳಿದುಬಂದರೆ ಕೂಡಲೇ ಠಾಣೆಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಕಾಲೋನಿಗಳಿಗೆ ಭೇಟಿ ನೀಡಿ ಸಭೆ ನಡೆಸಿ ಕಾನೂನು ಅರಿವು ಕಾರ್ಯಕ್ರಮ ನೀಡುವುದಾಗಿ ಹೇಳಿದರು.
ಠಾಣಾ ಪೊಲೀಸ್ ಸಿಬ್ಬಂದಿ ಮೋಹನ್ ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ ಹಲವು ಮಂದಿ ಉಪಸ್ಥಿತರಿದ್ದರು.