ಪುತ್ತೂರು : ದ್ಯೆವಗಳ ನರ್ತನ ಸೇವೆ ಮಾಡುವ ಡಾ.ರವೀಶ್ ಪಡುಮಲೆ ರವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಇಂಜಿನಿಯರಿಂಗ್ ಕೇತ್ರದಲ್ಲಿ ಡಾಕ್ಟರೇಟ್ ಪಡೆದು ಹಿರಿಯರು ಮಾಡುತ್ತಿದ್ದ ದ್ಯೆವ ನರ್ತನ ಸೇವೆಯನ್ನು ಮುಂದುವರಿಸುತ್ತಿರುವ ರವೀಶ್ ರವರು ಕೊಡಮಣಿತ್ತಾಯ, ಲೆಕ್ಕೆಸಿರಿ, ಜುಮಾದಿ ಬಂಟ, ಬೀರ್ಣಳ್ವ, ಪಿಲ್ಚಿಂಡಿ, ಬಬ್ಬರ್ಯ, ಪಂಜುರ್ಲಿ, ದ್ಯೆವಗಳ ನರ್ತನ ಸೇವೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಒಡಿಯೂರು ಶ್ರೀಗುರುದೇವಾನಂದ ಸ್ವಾಮಿ, ಅಕಾಡೆಮಿ ಅಧಕ್ಷ ದಯಾನಂದ ಜಿ. ಕತ್ತಲ್‌ಸಾರ್, ಶಾಸಕರಾದ ಸಂಜೀವ ಮಠಂದೂರು, ಸಾಹಿತಿ ನಾವಡ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಿಪಡಿತ್ತಾಯ, ಅಕಾಡೆಮಿ ಸದಸ್ಯ ದಿನೇಶ್ ಕಡಬ ಭಾಗವಹಿಸಿದ್ದರು.