ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಿರುವ ಇಲ್ಲಿನ ಅರುಣಾ ಚಿತ್ರಮಂದಿರದ ಎದುರಿನ ಪ್ರಭು ಬಿಲ್ಡಿಂಗ್ನಲ್ಲಿರುವ ಪ್ರೇರಣಾ ಸಂಸ್ಥೆಯಿಂದ ಎರಡು ದಿನ ನಡೆಯುವ ಭಾಷಣ ತರಬೇತಿ ಶಿಬಿರದ ಉದ್ಘಾಟನೆಯು ಅ.15 ನಡೆಯಿತು.
ಯಶಸ್ವಿ ಸಭಾ ಕಾರ್ಯಕ್ರಮ ನಿರ್ವಹಣೆ, ಉತ್ತಮ ವಾಗ್ಮಿಯಾಗುವ ಆಕಾಂಕ್ಷೆಗಳಿಗೆ ತಕ್ಕಂತೆ ’ಸಮರ್ಪಣಾ’ ಎನ್ನುವ ಭಾಷಣ ತರಬೇತಿ ಶಿಬಿರವನ್ನು ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಉದ್ಘಾಟಿಸಿದರು. ಅವರು ಎಲ್ಲಿ, ಯಾವ ಸಂದರ್ಭ, ಹೇಗೆ ಮಾತನಾಡಬೇಕೆಂಬ ಕುರಿತು ಭಾಷಣ ಕೌಶಲ್ಯ ನಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರ ನಿರಂತರ ನಡೆಯಬೇಕೆಂದರು. ಸಂಪನ್ಮೂಲ ವ್ಯಕ್ತಿ ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಮಾತನಾಡಿ ಪ್ರೇರಣಾ ಸಂಸ್ಥೆಯಿಂದ ಆಯೋಜಿಸಲಾದ ಈ ಕಾರ್ಯಗಾರ ಎಲ್ಲರ ಮುಂದಿನ ಭವಿಷ್ಯಕ್ಕೆ ದಾರಿಯಾಗಲಿದೆ ಎಂದರು. ಪ್ರೇರಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ ಸ್ವಾಗತಿಸಿ, ವಂದಿಸಿದರು. ನಿರ್ದೇಶಕ ಸಂತೋಷ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸ್ಪೋಕನ್ ಇಂಗ್ಲೀಷ್ ತರಗತಿಗೆ ದಾಖಲಾತಿ ಆರಂಭ
ಪ್ರೇರಣಾ ಸಂಸ್ಥೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ ತಿಳಿಸಿದರು.