ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ-ಚೆನ್ನಯ್ಯರ ನಾಮಕರಣಕ್ಕೆ ಕಾರಣಕರ್ತರಾದ ಶಾಸಕ ಮಠಂದೂರುರವರಿಗೆ ಬಿಲ್ಲವ ಸಮಾಜದಿಂದ ಅಭಿನಂದನೆ

0

ಪುತ್ತೂರು:ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳಾಗಿರುವ ಅವಳಿ ವೀರರಾದ ಕೋಟಿ ಚೆನ್ನಯ್ಯರ ಹೆಸರು ನಾಮಕರಣಕ್ಕೆ ಕಾರಣಕರ್ತರಾದ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಮಾಜದ ಪರವಾಗಿ ಪ್ರಮುಖರು ಅಭಿನಂದಿಸಿದರು.ಪುತ್ತೂರು ದರ್ಬೆಯಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಶಾಸಕರನ್ನು ಭೇಟಿ ಮಾಡಿದ ಬಿಲ್ಲವ ಸಮಾಜದ ಪ್ರಮುಖರು ಶಾಲು ಹೊದಿಸಿ, ಪುಷ್ಪ ನೀಡಿ ಗೌರವಿಸಿದರು.

ನಮ್ಮ ಮನವಿಗೆ ಶಾಸಕರ ಸ್ಪಂದನೆಗೆ ನಮ್ಮ ಅಭಿನಂದನೆ: ಗೆಜ್ಜೆಗಿರಿ ಮೂಲಸ್ಥಾನ ಕ್ಷೇತ್ರದ ಗೌರವಾಧ್ಯಕ್ಷರಾಗಿರುವ ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ಪುತ್ತೂರು ಬಿಲ್ಲವ ಸಂಘ ಮತ್ತು ಪುತ್ತೂರು ಯುವವಾಹಿನಿ ಘಟಕದ ವತಿಯಿಂದ ಮೂರು ವರ್ಷಗಳ ಹಿಂದೆ ಶಾಸಕರನ್ನು ಭೇಟಿ ಮಾಡಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಇಡುವಂತೆ ಮನವಿ ಮಾಡಿದ್ದೆವು.ಈ ಮನವಿಯನ್ನು ಸ್ವೀಕರಿಸಿದ ಶಾಸಕರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಬಹಳಷ್ಟು ಪ್ರಯತ್ನ ಪಟ್ಟ ಪರಿಣಾಮ ಇವತ್ತು ಸರಕಾರ ಒಪ್ಪಿಗೆ ನೀಡಿದೆ.ಈ ನಿಟ್ಟಿನಲ್ಲಿ ಇಡೀ ಬಿಲ್ಲವ ಸಮಾಜದ ಪರವಾಗಿ ಶಾಸಕರನ್ನು ಅಭಿನಂದಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಮಂದಿರದ ಮಾಜಿ ಕಾರ್ಯದರ್ಶಿ ಮತ್ತು ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ, ಶಶಿಧರ ಕಿನ್ನಿಮಜಲ್, ಚಂದ್ರಕಾಂತ್ ಶಾಂತಿವನ, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಪೂಜಾರಿ ಕುರಿಕ್ಕಾರ, ಬಾಬು ಪೂಜಾರಿ ಇದ್ಪಾಡಿ, ಜಯರಾಮ ಪೂಜಾರಿ ಒತ್ತೆಮುಂಡೂರು, ಸುನಿಲ್ ದಡ್ಡು, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here