ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ “ಕೋಟಿ ಕಂಠ ಗಾಯನ”

0

ನೆಲ್ಯಾಡಿ: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅ.೨೮ರಂದು ಬೆಳಿಗ್ಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗದರ್ಶನದಂತೆ ಕನ್ನಡ ನಾಡನ್ನು ಪ್ರತಿಬಿಂಬಿಸುವ ಹಾಡುಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಹಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಜಯರಾಜ್ ಎನ್.,ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು-ನುಡಿ, ಪರಿಸರ, ಸಂಸ್ಕೃತಿ, ಪರಂಪರೆಗಳನ್ನು ವರ್ಣಿಸುವ ಈ ಹಾಡುಗಳು ನಮ್ಮೆಲ್ಲರಲ್ಲಿ ನಮ್ಮ ನಾಡಿನ ಬಗ್ಗೆ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚಿಸುತ್ತವೆ. ಈ ನೆಲದ ಭವ್ಯ ಸಂಪನ್ಮೂಲಗಳನ್ನು, ಜೀವವೈವಿಧ್ಯತೆಯನ್ನು ಕಾಪಿಟ್ಟುಕೊಳ್ಳುವ ಜವಾಬ್ದಾರಿಯುತ ಕರ್ತವ್ಯ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸುತ್ತವೆ. ಹಾಗಾಗಿ ೬೭ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ, ವಿಜ್ರಂಭಣೆಯಿಂದ ಆಚರಿಸಲು ಆಸಕ್ತರಾಗಿರುವ ನಮಗೆ ಈ ಕೋಟಿ ಕಂಠ ಗಾಯನ ಕಾರ್ಯಕ್ರಮವು ಹೊಸ ಉತ್ಸಾಹವನ್ನು ತರುತ್ತದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪನ್ಯಾಸಕಿಯರಾದ ದಿವ್ಯಶ್ರೀ ಜಿ, ಶೃತಿ, ಸ್ಪೂರ್ತಿ ಕೆ.ಟಿ, ಡೀನಾ ಪಿ, ವೆರೊಣಿಕಾ ಪ್ರಭಾ, ದಿವ್ಯಾ ಕೆ, ಚಂದ್ರಕಲಾ, ನಿಶ್ಮಿತಾ ಪಿ, ಹಾಗೂ ಇತರೇ ಉಪನ್ಯಾಸಕ ವೃಂದದವರು ಪಾಲ್ಗೊಂಡು ಹಾಡುವುದರ ಮೂಲಕ ಕನ್ನಡ ನಾಡಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಹ ಸಂಯೋಜಕ ಡಾ.ಸೀತಾರಾಮ ಪಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುರೇಶ್ ಕೆ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ವನಿತಾ ಪಿ, ದೈಹಿಕ ನಿರ್ದೇಶಕ ಆನಂದ, ಗ್ರಂಥಪಾಲಕಿ ಶೋಭಾ, ಬೋಧಕೇತರ ಸಿಬ್ಬಂದಿಯವರಾದ ದಿವ್ಯಾ, ಸುಮಾ, ವಿಮಲಾ ಮತ್ತು ವಸಂತ ಸಾಲ್ಯಾನ್‌ರವರು, ಎಲ್ಲಾ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಅವರು ಸಂಕಲ್ಪ ವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here