ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸೈಂಟ್‌ಜೋಕಿಮ್ಸ್ ವಿದ್ಯಾ ಸಂಸ್ಥೆಗಳು ಕಡಬ ಇದರ ಆಶ್ರಯದಲ್ಲಿ ನವೆಂಬರ್ 9 ಮತ್ತು 10 ರಂದು ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ, ಕಡಬ ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಕ್ರೀಡಾ ನಿಸರ್ಗ 2022 .ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರುಇಲ್ಲಿನ ವಿಧ್ಯಾರ್ಥಿಗಳು ಭಾಗವಹಿಸಿ 8ನೇ ತರಗತಿ 14ರ ಬಾಲಕರ ವಿಭಾಗ ಮತ್ತು 14ರ ಬಾಲಕಿಯರ ವಿಭಾಗ ಎರಡರಲ್ಲಿಯೂ ಸಮಗ್ರ ಪ್ರಶಸ್ತಿಯನ್ನು ಹಾಗೂ ಪ್ರೌಢಶಾಲಾ 17ರ ಬಾಲಕಿಯರ ವಿಭಾಗ ಮತ್ತು ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಅದ್ವಿತೀಯ ಸಾಧನೆಗಳೊಂದಿಗೆ ಪಡೆದುಕೊಂಡಿರುತ್ತಾರೆ.
ಪ್ರಾಥಮಿಕ ವಿಭಾಗದ ಬಾಲಕ ಮತ್ತು ಬಾಲಕಿಯರ ವಿಭಾಗ : 7ನೇ ತರಗತಿಯ ಚೇತಸ್ (ಬಲ್ನಾಡು ಯೋಗೀಶ್ ಮತ್ತು ಕೇಸರಿ ದಂಪತಿಯ ಪುತ್ರ) 400ಮೀ ದ್ವಿತೀಯ, 600ಮೀ ದ್ವಿತೀಯ. 7ನೇ ತರಗತಿಯ ದಿವಿಜ್ಞಾ (ಕಲ್ಲರ್ಪೆಯ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿಯ ಪುತ್ರಿ) 200ಮೀ ಪ್ರಥಮ, 100ಮೀ ದ್ವಿತೀಯ ಮತ್ತು4×100ಮೀ ರಿಲೇ ದ್ವಿತೀಯ. 7ನೇ ತರಗತಿಯ ಸಾನ್ವಿತ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತ ದಂಪತಿಯ ಪುತ್ರಿ) 4×100 ಮೀ ರಿಲೇ ದ್ವಿತೀಯ. 7ನೇ ತರಗತಿಯ ಶಾನ್ವಿ( ಮೋಹನ್ ಭಂಡಾರಿ ಮತ್ತು ಸುಮಲತಾ ದಂಪತಿಯ ಪುತ್ರಿ) 4×100ಮೀ ರಿಲೇ ದ್ವಿತೀಯ. 7ನೇ ತರಗತಿಯ ನಿಧಿಶ್ರೀ (ಧೇರಣ್ಣ ಗೌಡ ಮತ್ತು ಹೇಮಲತಾ ದಂಪತಿಯ ಪುತ್ರಿ) 4×100ಮೀ ರಿಲೇ ದ್ವಿತೀಯ. 7ನೇ ತರಗತಿಯ ಚಿಂತನಾ (ಗಿರೀಶ್ ರಾಜ್ ಎಂ ವಿ ಮತ್ತು ಧನೇಶ್ವರಿ ಗೌಡ ದಂಪತಿಯ ಪುತ್ರಿ) 80ಮೀ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
14ರ ವಯೋಮಾನದ 8ನೇ ತರಗತಿ ಬಾಲಕ ಮತ್ತು ಬಾಲಕಿಯರ ವಿಭಾಗ : 8ನೇ ತರಗತಿಯ ಮನ್ವಿತ್ ನೆಕ್ಕರೆ (ಕಬಕದ ಉಮೇಶ್ ನೆಕ್ಕರೆ ಮತ್ತು ಕವಿತ ದಂಪತಿಯ ಪುತ್ರ) 80 ಮೀ ಹರ್ಡಲ್ಸ್ ನಲ್ಲಿ ಪ್ರಥಮ, ಉದ್ದಜಿಗಿತ ದ್ವಿತೀಯ ಮತ್ತು 4×100ಮೀ ರಿಲೇ ಪ್ರಥಮ. 8ನೇ ತರಗತಿಯ ಕೃಪಾಲ್ ಪಿ ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನಿತಾ ದಂಪತಿಯ ಪುತ್ರ) 600ಮೀ ಪ್ರಥಮ ಮತ್ತು4×100ಮೀ ರಿಲೇ ಪ್ರಥಮ. 8ನೇ ತರಗತಿಯ ಅಭಿಶ್ಯಾಮ (ಪರ್ಲಡ್ಕದ ಮುರಳೀಧರ ಮತ್ತು ರಾಜೇಶ್ವರಿ ದಂಪತಿಯ ಪುತ್ರ) 80 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ. 8ನೇ ತರಗತಿಯ ಮನ್ವಿತ್‌ರೈ( ಮಂಜುನಾಥ ರೈ ಮತ್ತು ಪ್ರವೀಣ ರೈದಂಪತಿಯ ಪುತ್ರ) 4×100ಮೀ ರಿಲೇ ಪ್ರಥಮ. 8ನೇ ತರಗತಿಯ ಮನೊಹರ್(ಪರ್ಲಡ್ಕದಮಿಶ್ರಾರಾಮ್ ಮತ್ತು ಲಕ್ಷ್ಮೀದಂಪತಿಯ ಪುತ್ರ) 4×100ಮೀ ರಿಲೇ ಪ್ರಥಮ.
8ನೇ ತರಗತಿಯ ಡಿಂಪಲ್ ಶೆಟ್ಟಿ( ಮೇರ್ಲ ಉದಯ ಶೆಟ್ಟಿ ಮತ್ತು ಸುನಿತಾ ಶೆಟ್ಟಿ ದಂಪತಿಯ ಪುತ್ರಿ) 100ಮೀ ಪ್ರಥಮ, 200ಮೀ ಪ್ರಥಮ, ಉದ್ದಜಿಗಿತ ದ್ವಿತೀಯ ಮತ್ತು4×100ಮೀ ರಿಲೇ ಪ್ರಥಮ. 8ನೇ ತರಗತಿ ಕೃತಿ ಕೆ( ಬನ್ನೂರು ಕೊರಗಪ್ಪಗೌಡ ಮತ್ತು ವನಿತ ಎ ದಂಪತಿಯ ಪುತ್ರಿ) 400ಮೀ ಪ್ರಥಮ, 600ಮೀ ಪ್ರಥಮ, 200ಮೀ ದ್ವಿತೀಯ ಮತ್ತು4×100ಮೀ ರಿಲೇ ಪ್ರಥಮ. 8ನೇ ತರಗತಿಯ ಶ್ರೀವರ್ಣಾ ( ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ ಪಿ ದಂಪತಿಯ ಪುತ್ರಿ) 80 ಮೀ ಹರ್ಡಲ್ಸ್ ನಲ್ಲಿ ಪ್ರಥಮ, ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ ಮತ್ತು 4×100ಮೀ ರಿಲೇ ಪ್ರಥಮ. 8ನೇ ತರಗತಿಯ ಅಮೃತಾ ಬಿ.ಎ(ಬನ್ನೂರು ಪಟ್ಟೆಯ ಅಮರ್‌ನಾಥ್ ಮತ್ತು ಶಿಕ್ಷಕಿ ಲತಾ ಕುಮಾರಿ ದಂಪತಿಯ ಪುತ್ರಿ) 4×100ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
17ರ ವಯೊಮಾನದ ಬಾಲಕ ಮತ್ತು ಬಾಲಕಿಯರ ವಿಭಾಗ : 9ನೇ ತರಗತಿಯ ಸಚಿತ್ ಪಿ ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನಿತಾ ದಂಪತಿಯ ಪುತ್ರ) 800ಮೀ ಪ್ರಥಮ. ಚರಣ್‌ಕುಮರ್ (ದೇವಗುಳಿ ಕೃಷ್ಣ ಕುಮರ್ ಮತ್ತು ಪ್ರೆಮ ದಂಪತಿಯ ಪುತ್ರ) 3000ಮೀ ದ್ವಿತೀಯ. 10ನೇ ತರಗತಿಯ ಆಶ್ರಯ್ ಎನ್ (ಶಶಿಧರ ಎನ್ ಮತ್ತು ರಾಜೀವಿ ದಂಪತಿಯ ಪುತ್ರ) 800ಮೀ ತೃತೀಯ. 9ನೇ ತರಗತಿಯ ಹಾರ್ದಿಕ್ ಪಿ ಕೆ ( ಪುರುಷೋತ್ತಮ ಮತ್ತು ಶಿಕ್ಷಕಿ ಪುಷ್ಪಲತಾ ದಂಪತಿಯ ಪುತ್ರ)5 ಕಿಮೀ ನಡಿಗೆ ತೃತೀಯ. 10ನೇ ತರಗತಿಯ ವಂಶಿ ಬಿ ಕೆ ( ಬಪ್ಪಳಿಗೆ ಕಮಲಾಕ್ಷ ಮತ್ತು ಜಯಲತಾ ದಂಪತಿಯ ಪುತ್ರಿ) 100ಮೀ ಹರ್ಡಲ್ಸ್ ನಲ್ಲಿ ಪ್ರಥಮ, 200ಮೀ ದ್ವಿತೀಯ, 100ಮೀ ತೃತೀಯ. ಮತ್ತು 4×100 ಮೀ ರಿಲೇ ಪ್ರಥಮ. 10ನೇ ತರಗತಿಯ ಲಿಖಿತಾ ಬಿ ರೈ( ಬಿ ಜಗನ್ನಾಥ್ ರೈ ಮತ್ತು ಗೀತಾಜೆ ರೈ ದಂಪತಿಯ ಪುತ್ರಿ) 4×100ಮೀ ರಿಲೇ ಪ್ರಥಮ. 9ನೇ ತರಗತಿಯ ಸಾನ್ವಿ ಎಸ್ ಪಿ (ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಂದರ ಪೂಜಾರಿ ಮತ್ತು ಹಾಗೂ ಶಿಕ್ಷಕಿ ಭವಿತಾ ದಂಪತಿಯ ಪುತ್ರಿ) 4×100ಮೀ ರಿಲೇ ಪ್ರಥಮ. 9ನೇ ತರಗತಿಯ ರಿಧಿ ಸಿ ಶೆಟ್ಟಿ (ಚಿದಾನಂದ ಮತ್ತು ಸತ್ಯವತಿ ಸಿ ಶೆಟ್ಟಿ) 4×100ಮೀ ರಿಲೇ ಪ್ರಥಮ. 10ನೇ ತರಗತಿಯ ಶ್ರದ್ಧಾ ಲಕ್ಷ್ಮೀ (ತಾರಿಗುಡ್ಡೆ ರವಿಶಂಕರ್ ಮತ್ತು ಅನುಪಮಾ ದಂಪತಿ ಪುತ್ರಿ) ತ್ರಿವಿಧಜಿಗಿತ ದ್ವಿತೀಯ. 9ನೇ ತರಗತಿಯ ಸಮೃದ್ಧಿ ಜೆ ಶೆಟ್ಟಿ ( ನೆಲ್ಲಿಕಟ್ಟೆಜಗದೀಶ್ ಶೆಟ್ಟಿ ಮತ್ತು ಹರಿಣಾಕ್ಷಿ ಜೆ ಶೆಟ್ಟಿ ದಂಪತಿಯ ಪುತ್ರಿ) ಉದ್ದಜಿಗಿತ ದ್ವಿತೀಯ, ಎತ್ತರಜಿಗಿತ ದ್ವಿತೀಯ, ಮತ್ತು 100ಮೀ ಹರ್ಡಲ್ಸ್ ನಲ್ಲಿ ತೃತೀಯ. 9ನೇ ತರಗತಿಯ ಪವಿತ್ರಾ( ಮೀನಾವು ಕೇಶವದಾಸ್ ಮತ್ತು ಸುಭಾಷಿಣಿ ದಂಪತಿಯ ಪುತ್ರಿ) ಹ್ಯಾಮರ್ ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತರು ನವೆಂಬರ್ 15 ಮತ್ತು 16 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.