ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಮಾಲೋಚನೆ ಸಭೆ

0

ದೇವಾಲಯ ನಿರ್ಮಾಣವೆಂದರೆ ಧರ್ಮ ಸಂಸ್ಕೃತಿಯ ಅನಾವರಣವಾದಂತೆ: ಒಡಿಯೂರು ಶ್ರೀ

ಎಲ್ಲರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ಸಾಗಬೇಕು: ಶ್ರೀ ಶ್ರೀಕೃಷ್ಣ ಗುರೂಜಿ

ವಿಟ್ಲ: ದೇವಾಲಯದ ನಿರ್ಮಾಣ ಸುಲಭವಲ್ಲ. ದೇವಾಲಯ ನಿರ್ಮಾಣವೆಂದರೆ ಧರ್ಮ ಸಂಸ್ಕೃತಿಯ ಅನಾವರಣವಾದಂತೆ. ಸುವಸ್ತುಗಳನ್ನು ಸಮರ್ಪಿಸಿ ಸೇವೆ ಸಲ್ಲಿಸುವ ಅವಕಾಶ ಇದೆ. ಭವ್ಯತೆ ಸೃಷ್ಟಿಗೆ ದಿವ್ಯ ದೃಷ್ಟಿ ಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ಮಾ.5ರಿಂದ ಮಾ.10ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನ.13 ರಂದು ನಡೆದ ಸಮಾಲೋಚನೆ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ತಾಯಿಯ ಸೇವೆಗೆ ಯಾರೂ ಸೇರಿಕೊಳ್ಳಬಹುದು. ಅನ್ನದಾನ ವ್ಯವಸ್ಥಿತವಾಗಿರಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಅತಿಥಿಗಳ ಉಪಚಾರ ಉತ್ತಮವಾಗಿರಬೇಕು. ಅರ್ಥಿಕ ಕ್ರೋಡೀಕರಣ, ಮಹಿಳೆಯರು ಯುವಕರ ತಂಡಗಳ ತಯಾರಾಗಬೇಕು. ಶಿಸ್ತು ಸಂಯಮ ಇದ್ದ ಸಂಘಟನೆ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿ ರವರು ಆಶೀರ್ವಚನ ನೀಡಿ ಕ್ಷೇತ್ರದ ಪ್ರಗತಿಗಾಗಿ ಊರ ಪರವೂರ ಭಕ್ತಾದಿಗಳು ಅನನ್ಯ ಸೇವೆ ತ್ಯಾಗ ಕಾರಣ. ಯಾವುದೇ ಕೆಲಸ ಸರಿಯಾಗಲು ಪಂಚಾಂಗ ದೃಢವಾಗಿರಬೇಕು. ಎಲ್ಲರಿಗೂ ಜವಾಬ್ದಾರಿ ಇದೆ. ಎಲ್ಲರ ಸಹಕಾರದಿಂದ ಈ ಮಹತ್ಕಾರ್ಯ ಯಶಸ್ವಿಯಾಗಬೇಕು ಎಂದು ಹೇಳಿದರು.

ವಿವಿಧ ವಲಯ ಸಮಿತಿಗಳನ್ನು ಗುರುತಿಸಲಾಯಿತು. ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ ಡಾ.ಗೀತಪ್ರಕಾಶ್ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.

ಯತೀಶ್ ಆಳ್ವ ಏಳ್ನಾಡುಗುತ್ತು, ವಿಟ್ಲ ಬಿಲ್ಲವ ಸಂಘದ ಬೆಳ್ಳಿಹಬ್ಬ ಸಂಭ್ರಮ ಸಮಿತಿ ಅಧ್ಯಕ್ಷ ಡಾ.ಗೀತಪ್ರಕಾಶ್, ನಿವೃತ್ತ ಮುಖ್ಯೋಪಾಧ್ಯಾಯ ಲಕ್ಷ್ಮಣ ನಾಯ್ಕ ಕಣ್ಣಕಜೆ, ನವೀನ ತಾರಿದಳ, ಸದಾಶಿವ ಶೆಟ್ಟಿ ಬೀಡಿನಬೈಲು, ಶೀನ ನಾಯ್ಕ ಅಡ್ಯನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರ್ಯಾಡಿ, ಐತ್ತಪ್ಪ ಪೂಜಾರಿ,ಅಶೋಕ್ ಶೆಟ್ಟಿ ಬಿರ್ಕಾಪು,  ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಗುಲಾಬಿ ಎನ್., ಹರೀಶ್ ಮಣಿಯಾಣಿ ತಚ್ಚಮೆ, ವಿಟ್ಠಲ ಶೆಟ್ಟಿ ಸುಣ್ಣಂಬಳ, ಶ್ರೀಧರ ಬಾಳೆಕಲ್ಲು, ಪ್ರವೀಣ್ ಅಳಿಕೆ, ದಿನೇಶ್ ರಾಯಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here