ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ನ 2023-24ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮ ಸಭೆ ನ.28ರಂದು ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅದ್ಯಕ್ಷತೆಯಲ್ಲಿ ಸುವರ್ಣ ಸಮುದಾಯ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿ ತಾ.ಪಂ.ಯೋಜನಾಧಿಕಾರಿ ಸುಕನ್ಯಾ, ಪಂಚಾಯತ್ ಸದಸ್ಯರಾದ ಭಾರತಿ ವಸಂತ್ ಕೌಡಿಚ್ಚಾರು, ಜಯಂತಿ ಪಟ್ಟುಮೂಲೆ, ಅನಿತಾ ಆಚಾರಿಮೂಲೆ, ಉಷಾರೇಖಾ ರೈ ಅಮೈ, ಪುಷ್ಪಲತಾ, ಮೀನಾಕ್ಷಿ ಮತ್ತು ರೇಣುಕಾಸತೀಶ್, ಪಿಡಿಒ ಪದ್ಮಕುಮಾರಿ, ಅಂಗನವಾಡಿ ಮೇಲಿಚಾರಕಿ ಸುಲೋಚನಾ ಉಪಸ್ಥಿತರಿದ್ದರು. ಕುಂಬ್ರ ಮೆಸ್ಕಾಂನ ಜೂನಿಯರ್ ಇಂಜಿನಿಯರ್ ರವೀಂದ್ರ, ತಾ.ಪಂ.ತೋಟಗಾರಿಕಾ ತಾಂತ್ರಿಕ ಸಹಾಯಕ ಆಕಾಂಕ್ಷ ಎ., ಜಲಜೀವನ್ ಮಿಷನ್ ಸಂಯೋಜಕ ಮಹಾಂತೇಶ್ ಹಿರೇಮಠ್, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನವ್ಯಾ ಎ., ಇಲಾಖಾವಾರು ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯರಾದ ರಾಜೇಶ್ ಎಚ್. ತ್ಯಾಗರಾಜೆ, ಮೋನಪ್ಪ ಪೂಜಾರಿ ಕೆರೆಮೂಲೆ, ಲೋಕೇಶ್ ಚಾಕೋಟೆ,ಪಂಚಾಯತ್ ಸಿಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಲಾವಣ್ಯ ಕಾವು, ಪೂರ್ಣಿಮಾ ಜಾರತ್ತಾರು ಬಹುಮಾನಿತರ ಪಟ್ಟಿ ವಾಚಿಸಿದರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಪ್ರಾಸ್ತಾವಿಕ ಮಾತನಾಡಿ ಪೂರ್ಣಿಮಾ ಎಂಬಿಕೆ ಸ್ವಾಗತಿಸಿದರು. ವಿದ್ಯಾ ಮಾಡ್ನೂರು ವಂದಿಸಿ ಆಶಾಕಾರ್ಯಕರ್ತೆ ವೇದಾವತಿ ಹೊಸಗದ್ದೆ ಕಾರ್ಯಕ್ರಮ ನಿರೂಪಿಸಿದರು.