ಸುದಾನ ಶಾಲೆಯಲ್ಲಿ ಟಿಂಕರ್ ಫೆಸ್ಟ್

0

ಪುತ್ತೂರು : ಸುದಾನ ಶಾಲೆಯಲ್ಲಿ ಟಿಂಕರ್ ಫೆಸ್ಟ್ ಕಾರ್ಯಕ್ರಮವು ನ.29 ಆಯೋಜಿಸಲ್ಪಟ್ಟಿತ್ತು. ಸುದಾನ ಶಾಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುಸಜ್ಜಿತವಾದ ಟಿಂಕರ್ ಲ್ಯಾಬ್ ಸ್ಥಾಪಿತಗೊಂಡಿದ್ದು 6 ರಿಂದ  9 ನೇ ತರಗತಿಯ ವಿದ್ಯಾರ್ಥಿಗಳು ಬೇಸಿಕ್ ಇಲೆಕ್ಟ್ರೋನಿಕ್ಸ್, ಸೆನ್ಸರ್‌ಗಳ ಉಪಯೋಗ, ವಯರ್‌ಲೆಸ್ ಟೆಕ್ನಾಲಜಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತರಬೇತಿಯನ್ನು ಪಡೆದು ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿದ್ದರು.

ಒಟ್ಟು 20 ಮಾದರಿಗಳನ್ನು ಪ್ರದರ್ಶಿಸಲಾಯಿತು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್ ಉಪಸ್ಥಿತರಿದ್ದು ದೀಪಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.

ಟಿಂಕರ್ ಲ್ಯಾಬ್ ನ ಸ್ಥಾಪಕ ನಂದನ್, ಅಭಿಲಾಷ್ ಹಾಗೂ ತರಬೇತುದಾರರಾದ ವಿನಯ್, ಟಿಂಕರ್ ಕೋರ್ಡಿನೇಟರ್  ಪ್ರತಿಮಾ ಎನ್.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ  ಶೋಭಾ ನಾಗರಾಜ್ ಸ್ವಾಗತಿಸಿ. ಶಾಲಾ ವಿಜ್ಞಾನ ಶಿಕ್ಷಕಿ  ಶಾರದಾ ವಂದನಾರ್ಪಣೆಗೈದರು. 

ಸಾಧನಾ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಕಂಪ್ಯೂಟರ್ ಶಿಕ್ಷಕರಂಜಿತ್ ಮಥಾಯಿಸ್ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here